More

    ಹೆಡ್​ಲೈನ್​ ಹುಡುಕಿದಂತಿದೆ ಪ್ಯಾಕೇಜ್​ ಎಂದ ಕಾಂಗ್ರೆಸ್​; ಸ್ವಾವಲಂಬಿ ಭಾರತವನ್ನಾಗಿಸುತ್ತೆ ಎಂದ ಬಿಜೆಪಿ

    ನವದೆಹಲಿ: ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮೂರನೇ ಲಾಕ್​ಡೌನ್ ಅವಧಿಯ ಕೊನೆಯ ಘಟ್ಟದಲ್ಲಿ ದೇಶ ಇರುವಾಗಲೇ, ನಾಲ್ಕನೇ ಅವಧಿ ಹೇಗಿರಲಿದೆ ಎಂಬ ಸುಳಿವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ರಾತ್ರಿ ದೇಶವಾಸಿಗಳಿಗೆ ತಿಳಿಸಿದ್ದಾರೆ. ಇದೇ ವೇಳೆ, ಕರೊನಾ ಲಾಕ್​ಡೌನ್ ಕಾರಣಕ್ಕೆ ಉಂಟಾಗಿರುವ ಆರ್ಥಿಕ ಬೆಳವಣಿಗೆ ಕುಸಿತವನ್ನು ಸರಿದೂಗಿಸಲು 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜನ್ನೂ ಅವರು ಘೋಷಿಸಿದ್ದಾರೆ. ಇದನ್ನು ಬಿಜೆಪಿ ನಾಯಕರು ಸಹಜವಾಗಿಯೆ ಆರ್ಥಿಕ ಪ್ಯಾಕೇಜನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್​, ಸಿಪಿಐ(ಎಂ) ನಾಯಕರು ವಿರೋಧಿಸಿ, ಲೇವಡಿ ಮಾಡಿದ್ದಾರೆ.

    ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಮೋದಿ ಸರ್ಕಾರ ದೇಶದ ಹಿತವನ್ನು ಗಮನದಲ್ಲಿರಿಸಿಕೊಂಡೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಇದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇದು ಕೇವಲ ಆರ್ಥಿಕ ಪ್ಯಾಕೇಜ್ ಅಲ್ಲ, ಒಟ್ಟಾರೆ ಸುಧಾರಣೆಗೆ ಉತ್ತೇಜನ ನೀಡುವಂಥ ಪ್ಯಾಕೇಜ್​ ಎಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಪ್ರಧಾನಿ ನರೇಂದ್ರ ಮೋದಿಯವರು 21ನೇ ಶತಮಾನದಲ್ಲಿ ಜಗತ್ತನ್ನು ಮುನ್ನಡೆಸಲಿರುವ ಭಾರತಕ್ಕೆ ಅಡಿಗಲ್ಲು ಹಾಕಿದ್ದಾರೆ. ಸ್ವಾಭಿಮಾನಿ ಭಾರತ ಎಂಬ ಮಂತ್ರವೇ ಈ ಬದಲಾವಣೆಯತ್ತ ನಮ್ಮನ್ನು ಕೊಂಡೊಯ್ಯಬಲ್ಲದು ಎಂದಿದ್ದಾರೆ.

    ಇದನ್ನೂ ಓದಿ: ಹೂಡಿಕೆ ಆಕರ್ಷಣೆಗೆ ‘ಟ್ಯಾಕ್ಸ್ ಹಾಲಿಡೆ?’

    ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಧಾನಿಯವರ ಘೋಷಣೆ ಭಾರತವನ್ನು ಮೇಲೆತ್ತಬಲ್ಲದು. ಅಷ್ಟೇ ಅಲ್ಲ, ಸ್ವಾಭಿಮಾನಿ ಭಾರತ ದೇಶದಲ್ಲಿ ಹೊಸ ಶಕ್ತಿಯನ್ನು ತುಂಬುವಂಥದ್ದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ಇದೇ ವೇಳೆ ಕಾಂಗ್ರಸ್​ನ ಮುಖ್ಯ ವಕ್ತಾರ ರಣದೀಪ್​ ಸುರ್ಜೆವಾಲಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಲಾಕ್​ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿ ಸರಿದೂಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರೀತಿಯ ಪ್ರಧಾನಮಂತ್ರಿಯವರೇ ನೀವು ಘೋಷಿಸುವ ವಿಷಯಗಳು ದೇಶಕ್ಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಹೆಡ್ಡಿಂಗ್ ಕೊಟ್ಟಂತಿದೆ. ಸಂವೇದನಾ ಶೀಲತೆ ಕಳೆದುಕೊಂಡಿರುವ ನಿಮ್ಮ ನಡವಳಿಕೆ ಬಗ್ಗೆ ಖೇದವಿದೆ. ಕಾಂಗ್ರೆಸ್ ಪಕ್ಷ ಅಸಹಾಯಕರ ಪರವಾಗಿ ನಿಲ್ಲಲಿದೆ ಎಂದು ಸರಣಿ ಟ್ವೀಟ್​ಗಳಲ್ಲಿ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ

    ಇದೇ ರೀತಿ ಇನ್ನೊಬ್ಬ ಕಾಂಗ್ರೆಸ್ ನಾಯಕ ಮನೋಜ್ ತಿವಾರಿ ಟ್ವೀಟ್ ಮಾಡಿದ್ದು, ಪ್ರಧಾನಿಯವರ ಭಾಷಣವನ್ನು ಒಂದೇ ಶಬ್ದದಲ್ಲಿ ಶೀರ್ಷಿಕೆ ಹುಡುಕಾಟ ಎಂದು ಹೇಳಬಹುದು. ಒಂದು ಸಂಖ್ಯೆ 20 ಲಕ್ಷ ಕೋಟಿ. ಆದರೆ ವಿವರಗಳಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ಕ್ಲಿನಿಕಲ್ ಪರೀಕ್ಷಾ ಹಂತದಲ್ಲಿ ಲಸಿಕೆ…!

    ಇದೇ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್​ ಪ್ರಧಾನಿ ಘೋಷಿಸಿರುವ ಪ್ಯಾಕೇಜ್​ ಅನ್ನು ಸ್ವಾಗತಿಸಿದ್ದಾರೆ. ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದೆವು. ತಡವಾಗಿ ಘೋಷಿಸುವುದಕ್ಕಿಂತ ಈಗಲೇ ಘೋಷಿಸಿದ್ದು ಖುಷಿಯ ವಿಚಾರ ಎಂದೂ ಟ್ವೀಟ್ ಮಾಡಿದ್ದಾರೆ.  ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಕೂಡ ವಲಸೆ ಕಾರ್ಮಿಕರ ವಿಚಾರ ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. (ಏಜೆನ್ಸೀಸ್)

    VIDEO|ದೀದಿ ನಾಡಿನಲ್ಲಿ ಹಿಂದುಗಳ ಮೇಲೆ ಹಿಂಸಾಚಾರ; ಮನೆಗಳಿಗೆ ಬೆಂಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts