More

    VIDEO|ದೀದಿ ನಾಡಿನಲ್ಲಿ ಹಿಂದುಗಳ ಮೇಲೆ ಹಿಂಸಾಚಾರ; ಮನೆಗಳಿಗೆ ಬೆಂಕಿ!

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ಹಲ್ಲೆ, ಹಿಂಸಾಚಾರದಂತಹ ಘಟನೆಗಳು ಈಗ ರಾಜಾರೋಷವಾಗಿ ನಡೆಯತೊಡಗಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‌್ಯದರ್ಶಿ ಕೈಲಾಸ್ ವಿಜಯವರ್ಗೀಯ ಆರೋಪಿಸಿದ್ದಾರೆ.

    ಇದಕ್ಕೆ ಪೂರಕವಾಗಿ ಅವರು ಟ್ವಿಟರ್‌ನಲ್ಲಿ ಮಂಗಳವಾರ ವಿಡಿಯೋ ಒಂದನ್ನು ಹಾಕಿದ್ದಾರೆ. ಅದರಲ್ಲಿ ಕೆಲವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಜನರು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ದೃಶ್ಯ ಅದರಲ್ಲಿದೆ.

    ಇದನ್ನೂ ಓದಿ ಹೊರ ರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ ಏರಿತು ಕರೊನಾ ಗ್ರಾಫ್!

    ಇದಕ್ಕೆ ಪೂರಕವಾಗಿ ಒಂದೆರಡು ಸಾಲಿನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ವಿಜಯವರ್ಗೀಯ, ‘‘ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಈಗ ಹಿಂದುಗಳ ಮೇಲೆ ರಾಜಾರೋಷವಾಗಿ ಹಿಂಸಾಚಾರ ನಡೆಯುವುದು ಆರಂಭವಾಗಿದೆ’’ ಎಂದು ಹೇಳಿದ್ದಾರೆ.

    ‘‘ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ಮನಬಂದಂತೆ ಹಲ್ಲೆ ನಡೆಸಲಾಗುತ್ತಿದೆ. ಆದರೆ ಸ್ಥಳೀಯ ಆಡಳಿತ ಮತ್ತು ಮಮತಾ ಬ್ಯಾನರ್ಜಿಯವರ ಸರ್ಕಾರ ಕಣ್ಣು ಮುಚ್ಚಿ ಕುಳಿತಿವೆ’’ ಎಂದು ಆರೋಪಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಸರಬರಾಜಾಗಲಿದೆ ಮದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts