More

    ಇನ್ನು 6 ವರ್ಷದಲ್ಲಿ ಸಿದ್ಧವಾಗಲಿದೆ ಮೇಡ್​ ಇನ್​ ಇಂಡಿಯಾ ತೇಜಸ್​-ಎನ್​ ಯುದ್ಧವಿಮಾನ

    ನವದೆಹಲಿ: ಕೋವಿಡ್​-19 ಸಂಕಷ್ಟದಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ವಲಯ ಸೇರಿ ವಿವಿಧ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಅಂಶಗಳನ್ನು ಪ್ರತಿಪಾದಿಸಿದ ಬೆನ್ನಲ್ಲೇ ಮೇಡ್​ ಇನ್​ ಇಂಡಿಯಾ ಫೈಟರ್​ಜೆಟ್​ ತೇಜಸ್​-ಎನ್​ ಉತ್ಪಾದನೆಗೆ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ) ಹಸಿರು ನಿಶಾನೆ ತೋರಿದೆ. ನೌಕಾಪಡೆಯ ಐಎನ್​ಎಸ್​ ವಿಕ್ರಮಾದಿತ್ಯ ಮತ್ತು ಸದ್ಯದಲ್ಲೇ ಸೇವೆಗೆ ಸೇರ್ಪಡೆಗೊಳ್ಳಲಿರುವ ಐಎನ್​ಎಸ್​ ವಿಕ್ರಾಂತ್​ನ ನೆಲೆಗಳಿಂದ ಈ ವಿಮಾನ ಹಾರಾಟ ಕೈಗೊಂಡು ಶತ್ರು ಪಾಳಯದಲ್ಲಿ ಎದೆನಡುಕ ಉಂಟು ಮಾಡಲಿದೆ. ಈ ಎರಡು ಇಂಜಿನ್​ವುಳ್ಳ ಈ ವಿಮಾನಗಳು ಇನ್ನು ಆರು ವರ್ಷದಲ್ಲಿ ತಯಾರಾಗಿ ನೌಕಾಪಡೆಯ ಸೇವೆಗೆ ಸೇರ್ಪಡೆಗೊಳ್ಳಲಿವೆ.

    ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಉಪಸ್ಥಿತಿಯಲ್ಲಿ ಮೇ 22ರಂದು ನಡೆದ ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರ ಸಭೆಯಲ್ಲಿ ಸ್ವದೇಶಿ ನಿರ್ಮಿತ ತೇಜಸ್​-ಎನ್​ ಯುದ್ಧವಿಮಾನಗಳ ಅಭಿವೃದ್ಧಿ ಕುರಿತು ಚರ್ಚಿಸಲಾಗಿತ್ತು. ಬಳಿಕ ಹೊಸ ಯುದ್ಧವಿಮಾನಗಳ ಕಾರ್ಯಾಚರಣೆಯ ಅವಶ್ಯಕತೆಗಳ (Operational Requirements) ಬಗ್ಗೆ ರಕ್ಷಣಾ ಸಚಿವಾಲಯದ ಏಕೀಕೃತ ಮುಖ್ಯಕಾರ್ಯಾಲಯ ಮಾರ್ಗಸೂಚಿಯನ್ನು ಹೊರಡಿಸಿತ್ತು.

    ಇನ್ನು 6 ವರ್ಷದಲ್ಲಿ ಸಿದ್ಧವಾಗಲಿದೆ ಮೇಡ್​ ಇನ್​ ಇಂಡಿಯಾ ತೇಜಸ್​-ಎನ್​ ಯುದ್ಧವಿಮಾನ

    ಸದ್ಯ ಲಭ್ಯವಿರುವ ಎರಡು ತೇಜಸ್​-ಎನ್​ ಪ್ರೋಟೋಟೈಪ್​ ಯುದ್ಧವಿಮಾನಗಳನ್ನು ಗೋವಾದಲ್ಲಿ ನೆಲೆಗೊಂಡಿರುವ ಐಎನ್​ಎಸ್​ ವಿಕ್ರಮಾದಿತ್ಯದ ನೆಲೆಯಲ್ಲಿ ಇಳಿಸಿ, ಅಲ್ಲಿಂದ ಹಾರಾಟ ನಡೆಸುವ ಮೂಲಕ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

    ಅಮೆರಿಕ ನೌಕಾಪಡೆ ಬಳಸುತ್ತಿರುವ ಬೋಯಿಂಗ್​ನ ಎಫ್​/ಎ-18 ಇ/ಎಫ್​ ಸೂಪರ್​ ಹಾರ್ನೆಟ್​ ಯುದ್ಧವಿಮಾನಗಳಿಗೆ ಮತ್ತು ಫ್ರೆಂಚ್​ ನೌಕಾಪಡೆ ಬಳಸುತ್ತಿರುವ ಮರೀನ್​ ರಫೇಲ್​ ಯುದ್ಧವಿಮಾನಗಳಿಗೆ ಸಮನಾದ ಸಾಮರ್ಥ್ಯ ತೇಜಸ್​-ಎನ್​ ಯುದ್ಧವಿಮಾನಕ್ಕೂ ಇದೆ. ತೇಜಸ್​-ಎನ್​ ಯುದ್ಧವಿಮಾನದಲ್ಲಿ ಆಕಾಶದಿಂದ ಆಕಾಶಕ್ಕೆ ನೆಗೆಯುವ 6 ಕ್ಷಿಪಣಿಗಳನ್ನು ಜೋಡಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.
    ಒಮ್ಮೆ ತಯಾರಾದ ಬಳಿಕ ತೇಜಸ್​-ಎನ್​ ಯುದ್ಧವಿಮಾನಗಳು ಹಾಲಿ ಸೇವೆಯಲ್ಲಿರುವ ಮಿಗ್​-29ಕೆ ಯುದ್ಧವಿಮಾನಗಳ ಬದಲಿಗೆ ಕಾರ್ಯನಿರ್ವಹಿಸಲಿವೆ. ಮಿಗ್​-29ಕೆ ಯುದ್ಧವಿಮಾನಗಳ ಸರ್ವಿಸಿಂಗ್​ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಸ್ವದೇಶಿ ನಿರ್ಮಿತ ಯುದ್ಧವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಒಲವು ತೋರುತ್ತಿದೆ ಎನ್ನಲಾಗಿದೆ.

    ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts