ಕೀನ್ಯಾ ಕ್ರಿಕೆಟ್​ ಮಂಡಳಿಯ ಬಿಕ್ಕಟ್ಟಿನಿಂದ ಗೊಂದಲ; ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ ಎಂದು ಕನ್ನಡಿಗ ದೊಡ್ಡ ಗಣೇಶ್​ ಸ್ಪಷ್ಟನೆ

web kenya
Published on

ಬೆಂಗಳೂರು: ಕೀನ್ಯಾ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಯಿಂದ ನಾನು ವಜಾಗೊಂಡಿಲ್ಲ. ಕೀನ್ಯಾ ಕ್ರಿಕೆಟ್​ ಮಂಡಳಿಯಲ್ಲಿನ ಎರಡು ಬಣಗಳ ನಡುವಿನ ಮನಸ್ತಾಪದಿಂದಾಗಿ ಸದ್ಯ ಕೋಚ್​ ಹುದ್ದೆಯಿಂದ ಕೆಳಗಿಳಿದಿರುವೆ. ಆದರೆ ಕೀನ್ಯಾ ಕ್ರಿಕೆಟ್​ ಮಂಡಳಿ ಮುಂದಿನ ಕೆಲ ದಿನಗಳಲ್ಲಿ ಬಿಕ್ಕಟ್ಟು ಬಗೆಹರಿಸಿ ನನ್ನನ್ನು ಹುದ್ದೆಯಲ್ಲಿ ಮುಂದುವರಿಸುವ ಭರವಸೆ ನೀಡಿದೆ ಎಂದು ಭಾರತ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ದೊಡ್ಡ ಗಣೇಶ್​ "ವಿಜಯವಾಣಿ'ಗೆ ಸ್ಪಷ್ಟನೆ ನೀಡಿದ್ದಾರೆ.

ಆಗಸ್ಟ್​ 13ರಂದು ಕೀನ್ಯಾ ತಂಡದ ಕೋಚ್​ ಆಗಿ ನೇಮಕಗೊಳ್ಳುವ ಮೂಲಕ 2026ರ ಟಿ20 ವಿಶ್ವಕಪ್​ಗೆ ಅರ್ಹತೆ ಒದಗಿಸುವ ಜವಾಬ್ದಾರಿ ಪಡೆದುಕೊಂಡಿದ್ದ ದೊಡ್ಡ ಗಣೇಶ್​, ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪದಿಂದಾಗಿ ವಜಾಗೊಂಡಿದ್ದಾರೆ ಎಂದು ಕೆಲದಿನಗಳ ಹಿಂದೆ ವರದಿ ಹರಡಿತ್ತು. ಆದರೆ ಇದು ಕೀನ್ಯಾ ಮಂಡಳಿಯೊಳಗಿನ ರಾಜಕೀಯದಿಂದಾಗಿ ಉಂಟಾಗಿರುವ ಗೊಂದಲ. ಅದು ಶ್ರೀವೇ ಬಗೆಹರಿಯುವ ವಿಶ್ವಾಸವಿದೆ. ಹೀಗಾಗಿ ನಾನಿನ್ನೂ ನೈರೋಬಿಯಲ್ಲೇ ಉಳಿದುಕೊಂಡಿರುವೆ. ಕೀನ್ಯಾ ಕ್ರಿಕೆಟ್​ ಮಂಡಳಿ ನನ್ನನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಿದೆ ಎಂದು ದೊಡ್ಡ ಗಣೇಶ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net