ಮೂಡಿಗೆರೆ: ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಎಲ್ಲ ಸದಸ್ಯರು ಒಮ್ಮತದಿಂದ ತೆಗೆದುಕೊಂಡ ತೀರ್ಮಾನದ ವಿರುದ್ಧ ಗ್ರಾಪಂ ಅಧ್ಯಕ್ಷರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರು ಹಳೆ ಮೂಡಿಗೆರೆ ಗ್ರಾಪಂ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಹಳೆ ಮೂಡಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ 4 ಮನೆ ಪೂರ್ಣ, 6 ಮನೆ ಭಾಗಶಃ ಸೇರಿ ಒಟ್ಟು 10 ಮನೆಗಳು ಕುಸಿದಿದೆ. ನಿರಾಶ್ರಿತರಿಗೆ ವರ್ಗ ಒಂದರ ಅನುದಾನ ಬಳಸಿ ಟಾರ್ಪಲ್ ಮತ್ತು ಆಹಾರ ಧಾನ್ಯದ ಕಿಟ್ ಖರೀದಿಸಿ ವಿತರಣೆಗೆ ಹೋಗುವಾಗ ಎಲ್ಲ ಸದಸ್ಯರಿಗೂ ತಿಳಿಸುವುದಾಗಿ ಜುಲೈ 25 ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ ಅಧ್ಯಕ್ಷರು ಟಾರ್ಪಲ್ ಮತ್ತು ಕಿಟ್ ಖರೀದಿಸುವಾಗ ಕಾಂಗ್ರೆಸ್ ಬೆಂಬಲಿತ ಸದಸ್ಯರ ಗಮನಕ್ಕೆ ತರದೇ ಶುಕ್ರವಾರ ಏಕಾಏಕಿ ಕೆಲ ಸದಸ್ಯರೊಂದಿಗೆ ತೆರಳಿ ಆಹಾರ ಧಾನ್ಯದ ಕಿಟ್ ಹಾಗೂ ಟಾರ್ಪಲ್ ವಿತರಿಸಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಪಿಡಿಗೆ ಬಳಿ ವಿಚಾರಿಸಿದಾಗ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ಅಧ್ಯಕ್ಷರಿಗೆ ವಿಚಾರಿಸಿದಾಗ ನಾವು ವಿತರಿಸಿದ್ದೇವೆ. ನಿಮಗೆ ತಿಳಿಸುವ ಅಗತ್ಯವಿಲ್ಲ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾರೆ. ಹಾಗಾಗಿ ಅಧ್ಯಕ್ಷರ ವಿರುದ್ಧ ಧರಣಿ ನಡೆಸಲಾಗುತ್ತಿದೆ. ಸ್ಥಳಕ್ಕೆ ತಾಪಂ ಇಒ ದಯಾವತಿ ಬರುವ ವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದರು.
ಸದಸ್ಯೆ ಜಾನಕಿ ಮಾತನಾಡಿ, ಕಳೆದ 9 ವರ್ಷದಿಂದ ಗ್ರಾಪಂ ಕಚೇರಿಯ ಕಂಪ್ಯೂಟರ್ ವಿಭಾಗದ ಹುದ್ದೆ ನಿಭಾಯಿಸುತ್ತಿದ್ದ ಸೌಮ್ಯ ಅವರನ್ನು ಅಧ್ಯಕ್ಷರು ಕೆಲಸದಿಂದ ವಜಾಗೊಳಿಸಿ ಆ ಹುದ್ದೆಗೆ ಹೊಸ ಅಭ್ಯರ್ಥಿ ನೇಮಿಸಲು ಅರ್ಜಿ ಆಹ್ವಾನಿಸಿದ್ದರು. ಹಳೆ ಮೂಡಿಗೆರೆ ಗ್ರಾಪಂ ವ್ಯಾಪ್ತಿಯಿಂದ 11 ಅರ್ಜಿಗಳು ಬಂದಿದ್ದವು. ಸ್ಥಳೀಯರನ್ನು ಕಡೆಗಣಿಸಿ ಬೇರೆ ಗ್ರಾಪಂ ವ್ಯಾಪ್ತಿಯ ದಾರದಹಳ್ಳಿ ಗ್ರಾಮದ ಯುವತಿಯನ್ನು ನೇಮಿಸಿಕೊಂಡಿದ್ದಾರೆ. ಸ್ಥಳೀಯರನ್ನು ನೇಮಿಸದ ಬಗ್ಗೆ ನಾವು ವಿಚಾರಿಸಿದ್ದಕ್ಕೆ ನಿಮಗೇಕೆ ನಾನು ತಿಳಿಸಬೇಕು. ಇದು ನನ್ನ ಪರಮಾಧಿಕಾರ ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ವರ್ಗ ಒಂದು ಹಾಗೂ ಶಾಸನಬದ್ಧ ಅನುದಾನದ ವಿತರಣೆ ವೇಳೆ ತಾರತಮ್ಯ ನೀತಿ ಅನುಸರಿಸುತ್ತಾರೆ. ಅಧ್ಯಕ್ಷರ ಈ ವರ್ತನೆ ಸರಿಯಲ್ಲ . ಹಿಂದಿನ ಎರಡುವರೆ ವರ್ಷದ ಅವಧಿಯಲ್ಲಿ ಈ ರೀತಿ ತಾರತಮ್ಯ ನಡೆಸುತ್ತಿರಲಿಲ್ಲ. ವಿವಿಧ ಪಕ್ಷದ ಬೆಂಬಲಿತ ಸದಸ್ಯರನ್ನು ಒಂದೇ ರೀತಿಯಲ್ಲಿ ನೋಡುತ್ತಿದ್ದರು. ಈಗ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಬೆಂಬಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಪಂ ಸದಸ್ಯೆ ಜ್ಯೋತಿ ಸಾಲ್ದಾನ ಇದ್ದರು.
ಗ್ರಾಮ ಪಂಚಾಯತಿ ಅಧ್ಯಕ್ಷರ ತಾರತಮ್ಯ ನೀತಿಗೆ ಖಂಡನೆ
You Might Also Like
ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …
ಬೆಂಗಳೂರು: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…