

ಪುತ್ತೂರು ಗ್ರಾಮಾಂತರ: ಬಡಗನ್ನೂರು ಗ್ರಾಮದ ಪಟ್ಟೆಯ ಪ್ರತಿಭಾ ಪ್ರೌಢಶಾಲೆಯಲ್ಲಿ ನಡೆದ ಸವಣೂರು ವಲಯಮಟ್ಟದ ಕ್ರೀಡಾಕೂಟದಲ್ಲಿ ಹದಿನೇಳರೊಳಗಿನ ವಯೋಮಾನದ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲೂ ಕೆಯ್ಯೂರಿನ ಕೆಪಿಎಸ್ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಪಿ. ಅವರು ಈ ಕ್ರೀಡಾಪಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಅತಿಥಿ ಶಿಕ್ಷಕಿಯರಾದ ನಾಗವೇಣಿ ಹಾಗೂ ರಮ್ಯಾ ಪಿ.ಡಿ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದ್ದರು ಎಂದು ಕೆಯ್ಯೂರು ಕೆಪಿಎಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ಕೆ.ಎಸ್.ವಿನೋದ್ ಕುಮಾರ್ ತಿಳಿಸಿದ್ದಾರೆ.