ಸಲೂನ್​ ಹುಡುಗನ ಮರ್ಮಾಂಗ ಸ್ಪರ್ಶಿಸಿದ ಲಾಯರ್​: ದೂರಿನಲ್ಲಿ ವಕೀಲನ ಕರಾಳ ಮುಖ ಅನಾವರಣ!

Saloon
Published on

ಕಟಕ್: ಸಲೂನ್​ನಲ್ಲಿ ಕೆಲಸ ಮಾಡುವ ಹುಡುಗನನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ದೂರು ದಾಖಲಿಸಿರುವ ಘಟನೆ ಒಡಿಶಾದ ಕಟಕ್​​ ನಗರದಲ್ಲಿ ಕಳೆದ ಬುಧವಾರ ನಡೆದಿದೆ.

ಲಾಯರ್​ ರಾಜೀವ್​​ ರಾಥ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಕಟಕ್​ ನಗರದ ಸಿಡಿಎ ಸೆಕ್ಟರ್​-9ರಲ್ಲಿ ಇರುವ ಸಲೂನ್​ನಲ್ಲಿ ಕೆಲಸ ಮಾಡುವ ಹುಡುಗನ ಸಹೋದರ ಲಾಯರ್​ ವಿರುದ್ಧ ಮರ್ಕತ್​ ನಗರ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ.

ಕೂದಲು ಕತ್ತರಿಸುವಾಗ ವಕೀಲರು, ಹುಡುಗನ ಮರ್ಮಾಂಗವನ್ನು ಸ್ಪರ್ಶಿಸಿದರು ಎಂದು ದೂರಿದ್ದಾರೆ. ಅಲ್ಲದೆ, ದೂರುದಾರನು ಈ ಕೃತ್ಯವನ್ನು ವಿರೋಧಿಸುತ್ತಿದ್ದಂತೆ, ವಕೀಲ ರಾಥ್ ನಿಂದಿಸಿದ್ದಲ್ಲದೆ, ಮುಂದಿನ ಭೀಕರ ಪರಿಣಾಮಗಳ ಬೆದರಿಕೆ ಸಹ ಹಾಕಿರುವ ಆರೋಪ ಇದೆ.

ಇದಕ್ಕೂ ಮುನ್ನ ವಕೀಲರು ಹುಡುಗನಿಗೆ ವಾಟ್ಸ್ಆ್ಯಪ್​ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಂತೆ. ಇಷ್ಟೇ ಅಲ್ಲದೆ, ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಹುಡುಗನನ್ನು ಒತ್ತಾಯಿಸುತ್ತಿದ್ದರು ಎಂದು ದೂರುದಾರ ಗಂಭೀರ ಆರೋಪ ಮಾಡಿದ್ದಾರೆ.

ಇದ್ಯಾವುದಕ್ಕೂ ಸಹಕರಿಸಿದಿದ್ದರೆ ಕೊಲೆ ಮಾಡುವುದಾಗಿಯೂ ಲಾಯರ್​ ಬೆದರಿಕೆ ಹಾಕಿದ್ದಾರೆಂದು ಹುಡುಗನ ಸಹೋದರ ದೂರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net