ಇನ್ನೇನ್ ಬಂದ್​​ಬಿಡುತ್ತೆ: ಸಚಿವೆ ನಿರ್ಮಲಾ ಸೀತಾರಾಮನ್​ ಭರವಸೆ

Nirmalaa
Published on

ನವದೆಹಲಿ: ಈ ವರ್ಷದ ಜಿಎಸ್​ಟಿ ಪರಿಹಾರ ಸೆಸ್ ಬಾಬ್ತು ಸಂಗ್ರಹವಾಗಿರುವ 20 ಸಾವಿರ ಕೋಟಿ ರೂ. ಮೊತ್ತವನ್ನು ಇವತ್ತು ರಾತ್ರಿಯೊಳಗೆ ಎಲ್ಲ ರಾಜ್ಯಗಳಿಗೆ ಹಂಚಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಇಂದು ನವದೆಹಲಿಯಲ್ಲಿ ನಡೆದ 42ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು. ಇದಕ್ಕಾಗಿ ಬಿಹಾರ ಡಿಸಿಎಂ ಸುಶೀಲ್​ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ ಎಂದೂ ಅವರು ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net