More

    ರಫ್ತು ಆರ್ಡರ್ ಪಡೆದುಕೊಂಡ ಕಂಪನಿ: 20% ಅಪ್ಪರ್ ಸರ್ಕ್ಯೂಟ್ ಹಿಟ್, 8 ರೂಪಾಯಿ ಪೆನ್ನಿ ಸ್ಟಾಕ್​ ಖರೀದಿ ಜೋರು

    ಮುಂಬೈ: ಗಾರ್ಮೆಂಟ್ ಮಂತ್ರ ಲೈಫ್​ಸ್ಟೈಲ್​ ಲಿಮಿಟೆಡ್‌ನ (Garment Mantra Lifestyle Ltd.) ಷೇರು ಶುಕ್ರವಾರ ಈ 20 % ಅಪ್ಪರ್​ ಸರ್ಕ್ಯೂಟ್​ ತಲುಪಿತು. ಅಂದರೆ, ಷೇರಿನ ಬೆಲೆ ಗರಿಷ್ಠ ಹೆಚ್ಚಳವಾದ ಶೇಕಡಾ 20ರಷ್ಟು ಏರಿಕೆ ಕಂಡು ರೂ 8.16 ರ ಬೆಲೆಯನ್ನು ತಲುಪಿತು.

    ಬಜೆಟ್ ದಿನದಂದು ಅಂದರೆ ಫೆಬ್ರವರಿ 1 ರಂದು ಭಾರೀ ಏರಿಳಿತದ ನಂತರ ಈ ಸ್ಟಾಕ್​ಗೆ ಮಾರುಕಟ್ಟೆಯಲ್ಲಿ ಫೆಬ್ರವರಿ 2 ರಂದು ಅಂದರೆ ಶುಕ್ರವಾರ ಹೊಳಪು ಮರಳಿತು.

    ಗುರುವಾರದಂದು ಈ ಷೇರಿನ ಬೆಲೆ 6.80 ರೂ. ಇತ್ತು. ಆದರೆ, ಶುಕ್ರವಾರ ಈ ಷೇರು 20 ಶೇಕಡಾ ಅಪ್ಪರ್ ಸರ್ಕ್ಯೂಟ್‌ ತಲುಪಿತು. ಈ ಮೂಲಕ ಇದರ 8.16 ರೂಪಾಯಿ ತಲುಪಿತು.

    ಇದು ಈ ಷೇರಿನ 52 ವಾರದ ಗರಿಷ್ಠ ಬೆಲೆಯೂ ಆಗಿದೆ. ಈ ಷೇರಿನ 52 ವಾರದ ಕನಿಷ್ಠ ಬೆಲೆ 3.78 ರೂ ಇತ್ತು. 2023ರ ಆಗಸ್ಟ್​ನಲ್ಲಿ ಇಷ್ಟೊಂದು ಕುಸಿತವನ್ನು ಷೇರು ಕಂಡಿತ್ತು.

    ಈ ಕಂಪನಿಯಲ್ಲಿ 50.10 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಅದೇ ಸಮಯದಲ್ಲಿ, ಸಾರ್ವಜನಿಕ ನೀಡಿದ ಷೇರುಗಳ ಪ್ರಮಾಣ ಶೇಕಡಾ 49.90.

    ಗಾರ್ಮೆಂಟ್ ಮಂತ್ರ ಲೈಫ್‌ಸ್ಟೈಲ್ ಲಿಮಿಟೆಡ್‌ನ ಷೇರುಗಳ ಏರಿಕೆಗೆ ಪ್ರಮುಖ ಕಾರಣವೊಂದಿದೆ. ಈ ಕಂಪನಿಯು ಇತ್ತೀಚೆಗೆ ದೊಡ್ಡ ಆರ್ಡರ್​ ಸ್ವೀಕರಿಸಿದೆ. ಈ ದೊಡ್ಡ ಪ್ರಮಾಣದ ರಫ್ತು ಆರ್ಡರ್ ಪಡೆದಿರುವ ಕುರಿತು ಕಂಪನಿ ಪ್ರಕಟಿಸಿದೆ. ಈ ಆರ್ಡರ್​ 14.19 ಕೋಟಿ ರೂ. ಮೊತ್ತದ್ದಾಗಿದೆ. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಸರಬರಾಜುಗಳನ್ನು ತಲುಪಿಸಲಾಗುತ್ತಿದೆ. ರಫ್ತು ಮಾರುಕಟ್ಟೆಯಿಂದ ಇಂತಹ ಆದೇಶ ಬಂದಿರುವುದು ಕಂಪನಿಯ ವ್ಯಾಪಾರ ಇತಿಹಾಸದಲ್ಲಿ ಇದೇ ಮೊದಲು.

    ಕಂಪನಿಯ ಎಂಡಿ ಏನು ಹೇಳಿದರು?:

    ಆದೇಶದ ಕುರಿತು ಮಾತನಾಡುತ್ತಾ, ಗಾರ್ಮೆಂಟ್ ಮಂತ್ರ ಲೈಫ್‌ಸ್ಟೈಲ್ ಲಿಮಿಟೆಡ್‌ನ ಎಂಡಿ ಪ್ರೇಮ್ ಅಗರ್ವಾಲ್ ಅವರು, – ನಾವು ತಂಡವಾಗಿ ಭವಿಷ್ಯದಲ್ಲಿಯೂ ನಮ್ಮ ಅತ್ಯುತ್ತಮ ಕೆಲಸವನ್ನು ಮಾಡುತ್ತೇವೆ. ಇದು ಆರಂಭವಷ್ಟೇ. ನಾವು ಈಗ ನ್ಯಾಯಯುತ ಬೆಲೆ ಸೂತ್ರ ಮತ್ತು ಗುಣಮಟ್ಟದ ಉತ್ಪನ್ನಗಳೊಂದಿಗೆ ಮುಂದುವರಿಯುವ ಯೋಜನೆಯಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

    ಫೆಬ್ರವರಿ 5 ರಂದು ಸಭೆ:
    ಏತನ್ಮಧ್ಯೆ, ಗಾರ್ಮೆಂಟ್ ಮಂತ್ರ ಲೈಫ್ ಸ್ಟೈಲ್ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 05/02/2024 ರಂದು ನಿಗದಿಪಡಿಸಲಾಗಿದೆ ಎಂದು ಬಿಎಸ್‌ಇಗೆ ತಿಳಿಸಲಾಗಿದೆ. ಕಂಪನಿಯ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಈ ಸಭೆಯಲ್ಲಿ ಘೋಷಿಸಲಾಗುತ್ತಿದೆ.

    ಈ ಕಂಪನಿಯು ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ವ್ಯಾಪಕ ಮತ್ತು ಉತ್ತಮ ಗುಣಮಟ್ಟದ ಉಡುಪುಗಳನ್ನು ಪೂರೈಸುತ್ತದೆ.

     

    ಮಾರುವವರೆ ಇಲ್ಲ, ಎಲ್ಲರೂ ಖರೀದಿಸುವರೇ… ರೂ. 14 ಇದ್ದ ಷೇರು ಈಗ 165 ರೂ; ಫೆ. 6ರಂದು ಸ್ಟಾಕ್ ಸ್ಪ್ಲಿಟ್, ಬೋನಸ್ ಷೇರು ಹಂಚಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts