

ಕೋಟ: ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಕಾರ್ಯಕ್ರಮ ಹಾಗೂ ಸ್ಪೋಕನ್ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಖಾ ಉಡುಪ ವಹಿಸಿದ್ದರು. ಹಂಗಾರಕಟ್ಟೆ ಚೇತನ ಪ್ರೌಢಶಾಲೆ ಸಹ ಶಿಕ್ಷಕ ಸುರೇಂದ್ರ ವಾಗ್ಲೆ ಮಾರ್ಗದರ್ಶಕರಾಗಿ ಆಗಮಿಸಿದ್ದರು. ಐರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಪ್ರೆಸಿಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಂಗ್ಲ ಭಾಷೆಯಲ್ಲಿ ಸರಳಸಂಭಾಷಣೆ, ಕಿರುನಾಟಕಗಳು, ಪಾತ್ರಾಭಿನಯ, ಅಭಿನಯ ಗೀತೆ ಇನ್ನಿತರ ಅಭಿವ್ಯಕ್ತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಆಂಗ್ಲ ಭಾಷಾ ಶಿಕ್ಷಕಿ ಉಷಾರಾಣಿ ಕಾರ್ಯಕ್ರಮ ಸಂಯೋಜಕರಾಗಿದ್ದರು. ವಿಜ್ಞಾನ ಶಿಕ್ಷಕಿ ವೀಣಾ, ಗೌರವ ಶಿಕ್ಷಕಿಯರಾದ ಯಶೋದಾ, ರಮ್ಯಾ, ಲವೀನಾ ಸಹಕರಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ನಿರೂಪಿಸಿದರು. ಅಂತೋನಿ ಸ್ವಾಗತಿಸಿದರು. ರಿತೇಶ್ ವಂದಿಸಿದರು.