ಕಾಮನ್​ವೆಲ್ತ್​ ಗೇಮ್ಸ್​: ಪಾಕ್​​ಗೆ ಮೊದಲ ಚಿನ್ನ ತಂದುಕೊಟ್ಟ ಕ್ರೀಡಾಪಟುವಿಗೆ ಭಾರತದ ವೇಟ್ ಲಿಫ್ಟರ್ ಪ್ರೇರಣೆಯಂತೆ!

06
Published on

ಲಂಡನ್: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿಂದು ಪಾಕಿಸ್ತಾನದ ಮುಹಮ್ಮದ್ ನೂಹ್ ಚೊಚ್ಚಲ ಚಿನ್ನ ಗೆದ್ದರು. ಪುರುಷರ 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ 405 ಕೆಜಿ ಭಾರ ಎತ್ತುವ ಮೂಲಕ ಪಾಕ್​ ಕ್ರೀಡಾಪಟು ಈ ಸಾಧನೆ ಮಾಡಿದರು.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 24 ವರ್ಷದ ಈ ಕ್ರೀಡಾಳುವಿಗೆ ಭಾರತದ ವೇಟ್ ಲಿಫ್ಟರ್ ಮೀರಾಬಾನು ಚಾನು ಪ್ರೇರಣೆಯಂತೆ. "ಕಳೆದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾ ಬಾಯಿ ಬೆಳ್ಳಿ ಗೆದ್ದಿದ್ದು ನನ್ನಲ್ಲಿ ಹೆಮ್ಮೆ ಉಂಟು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಬರುವ ನಾವೂ ಸಹ ಪದಕ ಗೆಲ್ಲಬಲ್ಲೆವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ" ಎಂದರು.

2015ರಲ್ಲಿ ಪುಣೆಯಲ್ಲಿ ನಡೆದ ಯೂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗಿಯಾಗಿರುವುದನ್ನು ಮೆಲುಕು ಹಾಕಿದ ಮುಹಮ್ಮದ್, 2016ರಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ಸೌತ್ ಏಷ್ಯನ್​ ಗೇಮ್ಸ್​​ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಅಪಾರ ಪ್ರೀತಿ ಹಾಗೂ ಬೆಂಬಲ ಸಿಕ್ಕಿದೆ ಎಂದು ಹೇಳಿದರು. ಭಾರತಕ್ಕೆ ಮತ್ತೊಮ್ಮೆ ಹೋಗಬೇಕೆಂದಿರುವ ಅವರು, ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳು ನನಗೆ ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net