

ಅನ್ಸಾರ್ ಇನೋಳಿ ಉಳ್ಳಾಲ
ಗ್ರಾಮ ಪಂಚಾಯಿತಿಗೆ ಆದಾಯದ ಕನಸಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ವಾಣಿಜ್ಯ ಸಂಕೀರ್ಣ, ಪಂಚಾಯಿತಿಗೆ ಬಂದ ಪ್ರಶಸ್ತಿಯ ಎಲ್ಲ ಹಣ ಸಂಕೀರ್ಣಕ್ಕೆ ಮೀಸಲಿಟ್ಟ ಆಡಳಿತ ವರ್ಗ… ಒಂದೂವರೆ ವರ್ಷ ಕಳೆದರೂ ಕಟ್ಟಡ ವಾತ್ರ ಮೇಲೇಳಲೇ ಇಲ್ಲ. ಆದಾಯ ನಿರೀಕ್ಷೆಯಲ್ಲಿದ್ದ ಪಂಚಾಯಿತಿಗೆ ಹಿನ್ನಡೆಯೂ ಆಗಿದೆ. ಇದು ಮುನ್ನೂರು ಗ್ರಾಮ ಪಂಚಾಯಿತಿಯ ಕಥೆ!
ಮುನ್ನೂರು ಗ್ರಾ.ಪಂ.ಗೆ ಕುತ್ತಾರ್ ಜಂಕ್ಷನ್ ಹದಯ ಇದ್ದಂತೆ. ಸನಿಹದಲ್ಲೇ ನಾಲ್ಕು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿರುವುದು ಕುತ್ತಾರ್ ಪ್ರದೇಶವನ್ನು ಗುರುತಿಸುವಂತೆ ವಾಡಿದೆ. ಮಂಗಳೂರು ವಿಶ್ವವಿದ್ಯಾಲಯ, ಮುಡಿಪು ಭಾಗಕ್ಕೂ ಕುತ್ತಾರ್ ಜಂಕ್ಷನ್ ದಾಟಿಯೇ ಹೋಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೊರಗತನಿಯ ಆದಿಸ್ಥಳವೂ ಕುತ್ತಾರ್‌ನಲ್ಲಿದ್ದು ರಾಜ್ಯಾದ್ಯಂತ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಎಲ್ಲ ಕಾರಣಗಳಿಂದ ಕುತ್ತಾರ್ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ.
ಜಂಕ್ಷನ್‌ನಲ್ಲೇ ಮುನ್ನೂರು ಗ್ರಾಮ ಪಂಚಾಯಿತಿಗೆ ಇದ್ದ 17.50 ಸೆಂಟ್ಸ್ ಜಮೀನು ಕೋಟಿ ಕೋಟಿ ಬೆಲೆ ತೂಗುವಂಥದ್ದು. ಪಾಳು ಬಿದ್ದಿದ್ದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಪಂಚಾಯಿತಿಗೆ ಆದಾಯ ಹೆಚ್ಚಿಸಲು ಆಡಳಿತಗಾರರು ಯೋಚಿಸಿ ಶಾಸಕರ ಬಳಿ ಚರ್ಚಿಸಿದಾಗ ಹಸಿರು ನಿಶಾನೆಯೂ ಸಿಕ್ಕಿತ್ತು.
ಮುನ್ನೂರು ಗ್ರಾಮ ಪಂಚಾಯಿತಿಗೆ ಸರ್ಕಾರಿ ಮಟ್ಟದಲ್ಲಿ ಕೆಲವು ಪ್ರಶಸ್ತಿಗಳು ಬಂದಿವೆ. ಅವುಗಳ ಪೈಕಿ ಕೇಂದ್ರ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಪಂಚಾಯಿತಿ ಸಶಸೀಕರಣ ಪುರಸ್ಕಾರ್ ಪ್ರಶಸ್ತಿಯಿಂದ 12 ಲಕ್ಷ ರೂ. ನಗದು, ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ 25 ಲಕ್ಷ ರೂ. ನಗದು ಹಾಗೂ ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಐದು ಲಕ್ಷ ರೂ. ಒಟ್ಟು 42 ಲಕ್ಷ ರೂ. ನಗದು ಲಭಿಸಿದೆ. ಈ ಹಣವನ್ನು ಕಟ್ಟಡ ನಿರ್ವಾಣಕ್ಕೆ ಮೀಸಲಿಡಲಾಗಿದೆ.
ಮೂರು ಮಹಡಿ ಕಟ್ಟಡ ನಿರ್ವಾಣಕ್ಕೆ ಗ್ರಾಮ ಪಂಚಾಯಿತಿ ಯೋಜನೆ ರೂಪಿಸಿತು. ಶೇ.25ರಷ್ಟು ಎಸ್‌ಸಿ ಎಸ್‌ಟಿಗಳಿಗೆ ಮೀಸಲಾತಿ ಇಡಬೇಕೆನ್ನುವ ಸರ್ಕಾರದ ನಿಯಮದಂತೆ ಕಟ್ಟಡದ ಮೇಲ್ಭಾಗದ ಕೋಣೆಗಳನ್ನು ಮೀಸಲಿಡಲು ಯೋಜನೆ ರೂಪಿಸಲಾಯಿತು. ಕಳೆದ ವರ್ಷ ವಾರ್ಚ್ 20ರಂದು ಮದನಿ ನಗರ ಜುವಾ ಮಸೀದಿಯ ಧರ್ಮಗುರು ಕರೀಂ ಮುಸ್ಲಿಯಾರ್, ಪುರೋಹಿತ ರಾವೇಂದ್ರ ಹೊಳ್ಳ, ರಾಣಿಪುರ ಚರ್ಚ್ ಧರ್ಮಗುರು ಫಾ.ಜಯಪ್ರಕಾಶ್ ಡಿಸೋಜ ನೇತತ್ವದಲ್ಲಿ ಶಾಸಕರಾಗಿದ್ದ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದರು. ಕೆಲವೇ ದಿನಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿವತ್ತರಾಗಿದ್ದರಿಂದ ಆರ್‌ಟಿಸಿ ಸಿದ್ಧಪಡಿಸಲು ಅಡ್ಡಿಯಾಯಿತು. ಇನ್ನೂ ಕೆಲವೊಂದು ಕಾರಣಗಳಿಂದ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ.
ಗ್ರಾಮಕ್ಕೆ ಹದಯ ಭಾಗ ಕುತ್ತಾರ್, ಜಾಗಕ್ಕೆ ಚಿನ್ನದ ದರ ಇದೆ. ಇಲ್ಲಿರುವ ಸರ್ಕಾರಿ ಪಾಳುಬಿದ್ದಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸಿ ಉತ್ತಮ ಆದಾಯ ತರುವ ಹಿನ್ನೆಲೆಯಲ್ಲಿ ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಬಂದ ಎಲ್ಲ ಪುರಸ್ಕಾರಗಳ ಹಣ ಕಟ್ಟಡ ನಿರ್ವಾಣಕ್ಕೆ ಮೀಸಲಿಡಲಾಗಿದ್ದು ಹೆಚ್ಚಿನ ಅನುದಾನಕ್ಕೆ ಸರ್ಕಾರದಿಂದ ಮನವಿ ಸಲ್ಲಿಸಲಾಗಿದೆ. ವಿಲ್ಫ್ರೆಡ್ ಡಿಸೋಜ, ವಾಜಿ ಅಧ್ಯಕ್ಷರು, ಮುನ್ನೂರು ಗ್ರಾಮ ಪಂಚಾಯಿತಿ
ವಿಲ್ಫ್ರೆಡ್ ಡಿಸೋಜ, ವಾಜಿ ಅಧ್ಯಕ್ಷರು, ಮುನ್ನೂರು ಗ್ರಾಮ ಪಂಚಾಯಿತಿ
ವಿವಿಧ ಪುರಸ್ಕಾರಗಳಿಂದ ಬಂದ 40 ಲಕ್ಷ ರೂ. ಹಣವಿದ್ದು ಹೆಚ್ಚುವರಿ ಹಣ ನೀಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಶಾಸಕರ ಗಮನಕ್ಕೆ ತಂದು ಅನುದಾನ ಸಿಕ್ಕಿದ ಕೂಡಲೇ ಕೆಲಸ ಆರಂಭಿಸಲಾಗುವುದು. ಆರ್.ಕೆ.ಸಿ.ಅಝೀಝ್, ಸದಸ್ಯರು, ಮುನ್ನೂರು ಗ್ರಾಮ ಪಂಚಾಯಿತಿ
ಆರ್.ಕೆ.ಸಿ.ಅಝೀಝ್, ಸದಸ್ಯರು, ಮುನ್ನೂರು ಗ್ರಾಮ ಪಂಚಾಯಿತಿ