

ಮುಂಬೈ: ವಿಶ್ವವನ್ನೇ ನಡುಗಿಸುತ್ತಿರುವ ಕರೊನಾ ಮಹಾಮಾರಿಯಿಂದಾಗಿ ಭಾರತದ ಷೇರುಪೇಟೆಯಲ್ಲಿ ಮತ್ತೆ ಕರಡಿ ಹುಚ್ಚೆದ್ದು ಕುಣಿದಿದ್ದರಿಂದಾಗಿ ಗುರುವಾರ ಒಂದೇ ದಿನ 11.27 ಲಕ್ಷ ಕೋಟಿ ರೂ. (-ಠಿ; 11,27,160.65) ಸಂಪತ್ತು ಕರಗಿ ಹೋಗಿದೆ. ಇದು 12 ವರ್ಷದಲ್ಲೇ ಸಂಭವಿಸಿದ ಅತಿ ದೊಡ್ಡ ಕುಸಿತವಾಗಿದೆ. ಸಾವಿರಾರು ಜನರನ್ನು ಬಲಿ ಪಡೆದಿರುವ ಕರೊನಾದಿಂದಾಗಿ ಬಹುತೇಕ ಉದ್ಯಮಗಳು ನೆಲಕಚ್ಚಿರುವ ಪರಿಣಾಮ ಜಾಗತಿಕ ಮಟ್ಟದಲ್ಲೂ ಷೇರು ಪೇಟೆ ಕಂಪಿಸಿದೆ.
ಗುರುವಾರ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ನಲ್ಲಿ 2,919.26 ಪಾಯಿಂಟ್ (ಶೇ.8.18) ಇಳಿಕೆ ಕಂಡು,ವಹಿವಾಟು 32,778.14ಕ್ಕೆ ಮುಟ್ಟಿದೆ. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿಯಲ್ಲಿ 868.25 (ಶೇ 8.30) ಅಂಶ ಕುಸಿತದೊಂದಿಗೆ ದಿನ ವಹಿವಾಟು 9,590.15ಕ್ಕೆ ಕುಸಿತ ಕಂಡಿದೆ. ವಹಿವಾಟು ಆರಂಭವಾದಾಗಿನಿಂದ ಇಳಿಕೆಯ ಹಾದಿಯನ್ನೇ ಹಿಡಿದ ಸೆನ್ಸೆಕ್ಸ್ನಲ್ಲಿ ಮಧ್ಯಂತರ ವಹಿವಾಟಿನ ವೇಳೆ 3,2054 ಪಾಯಿಂಟ್ ಮತ್ತು ನಿಫ್ಟಿಯಲ್ಲಿ 950 ಅಂಶ ಕುಸಿದಿತ್ತು. ಕರೊನಾ ಭೀತಿಯಿಂದಾಗಿ ಹೆದರಿರುವ ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರು ಮಾರಾಟ ಮಾಡುತ್ತಿದ್ದಾರೆ. ಗುರುವಾರ ಇದರ ಪ್ರಮಾಣ -ಠಿ; 3,515.38 ಕೋಟಿಯಷ್ಟಿತ್ತು.
ಅತಿ ಹೆಚ್ಚು ನಷ್ಟ: ಮುಂಬೈ ಷೇರುಪೇಟೆಯ ಎಸ್ಆಂಡ್ಪಿ ಸೂಚ್ಯಂಕದಲ್ಲಿ ಶೇ.7.5 ಮತ್ತು ನಿಫ್ಟಿ 50ರಲ್ಲಿ ಶೇ. 6 ನಷ್ಟವಾಗಿದೆ. ಲೋಹ, ತೈಲ ಮತ್ತು ಅನಿಲ, ರಿಯಾಲಿಟಿ, ಬ್ಯಾಂಕಿಂಗ್, ಆಟೋಮೊಬೈಲ್, ಕೈಗಾರಿಕೆ, ಆರೋಗ್ಯಸೇವೆ, ವಿದ್ಯುತ್ ವಲಯಗಳ ಷೇರು ಮೌಲ್ಯ ಶೇ. 8ರಿಂದ 10 ಇಳಿಕೆ ಕಂಡಿದೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್ಗಳಲ್ಲಿ ಶೇ 8.2ರಿಂದ 9ರವರೆಗೂ ಲುಕ್ಸಾನು ಉಂಟಾಗಿದೆ. ಭಾರತ್ ಪೆಟ್ರೋಲಿಯಂ, ಟಾಟಾ ಮೋಟಾರ್ಸ್, ವೇದಾಂತ, ಆಕ್ಸಿಸ್ ಬ್ಯಾಂಕ್, ಐಟಿಸಿ, ಅದಾನಿ ಪೋರ್ಟ್ಸ್, ಮಹಿಂದ್ರಾ ಆಂಡ್ ಮಹಿಂದ್ರಾ, ಹೀರೋ ಮೋಟೊಕಾರ್ಪ್, ಬಜಾಜ್ ಆಟೋ, ಟಿಸಿಎಸ್, ಒಎನ್ಜಿಸಿ, ಗೇಲ್ ಇಂಡಿಯಾ, ಹಿಂಡಾಲ್ಕೊ. ಇಂಡಸ್ಲ್ಯಾಂಡ್ ಬ್ಯಾಂಕ್, ಎಸ್ಬಿಐಗಳ ಷೇರು ಮೌಲ್ಯ ಶೇ. 10ರಿಂದ 15ರವರೆಗೂ ಪತನವಾಗಿದೆ. ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ, ಟಿಸಿಎಸ್ ಬ್ಯಾಂಕ್ಗಳ ಷೇರು ಸೆನ್ಸೆಕ್ಸ್ನಲ್ಲಿ ಸಾವಿರಕ್ಕೂ ಹೆಚ್ಚು ಪಾಯಿಂಟ್ ಇಳಿಕೆ ಆಗಿದೆ.
22 ಲಕ್ಷ ಕೋಟಿಗೇರಿದ ನಷ್ಟ: ಕಳೆದ ಸೋಮವಾರ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 2,400 ಪಾಯಿಂಟ್ವರೆಗೆ ಕುಸಿತ ಕಂಡು ದಿನದ ವಹಿವಾಟಿನ ಅಂತ್ಯಕ್ಕೆ 1,941 ಅಂಶ (ಶೇ.5.17) 35,634.95 ತಲುಪಿತ್ತು ಮತ್ತು ನಿಫ್ಟಿಯಲ್ಲಿ ಮಧ್ಯಂತರದಲ್ಲಿ 730 ಅಂಶ ಇಳಿಕೆಯಾಗಿ ವಹಿವಾಟಿನ ಕೊನೆಗೆ 538 ಪಾಯಿಂಟ್ ಕುಸಿತ ದಾಖಲಿಸಿ 10,451.45ಕ್ಕೆ ಸ್ಥಿರಗೊಂಡಿತ್ತು. ಇದರಿಂದ ಹೂಡಿಕೆದಾರರ ಸುಮಾರು -ಠಿ; 7 ಲಕ್ಷ ಕೋಟಿ ಸಂಪತ್ತು ಒಂದೇ ದಿನ ಕರಗಿತ್ತು. ಗುರುವಾರದ ನಷ್ಟವೂ ಸೇರಿದಂತೆ ಕಳೆದ ವಾರದಿಂದೀಚೆಗೆ ಆಗಿರುವ ಲುಕ್ಸಾನು ಪ್ರಮಾಣ -ಠಿ; 22 ಲಕ್ಷ ಕೋಟಿ ದಾಟಿದೆ.
ಆರ್ಬಿಐ ಕ್ರಮ ಸಾಧ್ಯತೆ
ವಿಪರೀತ ಕುಸಿತ ಕಾಣುತ್ತಿರುವ ಮತ್ತು ಹೂಡಿಕೆದಾರರ ಸಂಪತ್ತನ್ನು ಕರಗಿಸುತ್ತಿರುವ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ತರಲು ಆರ್ಬಿಐ ಕೆಲವು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪೂರೈಕೆ ವಲಯದಲ್ಲಿ ಪಾವತಿಗೆ ಅಡಚಣೆ ತಪ್ಪಿಸುವ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಹಣಕಾಸು ಹರಿವು ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ. ಇದಕ್ಕಾಗಿ ಮರುಪಾವತಿಗಳನ್ನು ಸುಗಮಗೊಳಿಸಲು ಬ್ಯಾಂಕ್ಗಳಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಡ್ಡಿ ದರ ತಗ್ಗಿಸುವ ಕುರಿತೂ ಪರಿಶೀಲಿಸುತ್ತಿರುವ ಆರ್ಬಿಐ, ದ್ವೈಮಾಸಿಕವಾಗಿ ನಡೆಯುವ ಹಣಕಾಸು ನೀತಿ ಸಮಿತಿ ಮಾರ್ಚ್ 31ಕ್ಕೆ ನಡೆಸಲು ನಿರ್ಧರಿಸಿದೆೆ. ಕಳೆದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಈ ಸಾರಿ ರೆಪೊ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ನಷ್ಟಕ್ಕೇನು ಕಾರಣ?
ಕರೊನಾ ಸೋಂಕನ್ನು ಸಾಂಕ್ರಾಮಿಕವೆಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿದ ಬೆನ್ನಿಗೆ ಜಾಗತಿಕ ಷೇರುಪೇಟೆಯಲ್ಲಿನ ತಲ್ಲಣ ಮತ್ತು ಯುರೋಪ್ ದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ಅಮೆರಿಕ ನಿರ್ಬಂಧ ವಿಧಿಸಿರುವ ಕಾರಣ ಭಾರತದ ಷೇರುಪೇಟೆಯಲ್ಲಿ ಭಾರಿ ನಡುಕ ಉಂಟಾಗಿದೆ. ವಿದೇಶಿ ಹೂಡಿಕೆದಾರರು ಸ್ಪರ್ಧೆಗೆ ಬಿದ್ದವರಂತೆ ಷೇರು ಮಾರಾಟ ಮಾಡುತ್ತಿರುವುದು ಈ ನಡುಕವನ್ನು ಇನ್ನಷ್ಟು ಹೆಚ್ಚಿಸಿದೆ.
ಯಾರ್ಯಾರಿಗೆ ನಷ್ಟ
(ಷೇರುಪೇಟೆ)
ರೂಪಾಯಿ ಮಂಕು
ಷೇರುಪೇಟೆಯಲ್ಲಿನ ಕುಸಿತದ ಅಡ್ಡ ಪರಿಣಾಮ ವಿದೇಶಿ ವಿನಿಮಯದಲ್ಲೂ ಉಂಟಾಗಿದ್ದು, ಡಾಲರ್ ಎದುರು ರೂ. ಮೌಲ್ಯ 56ಪೈಸೆ ಇಳಿಕೆಯಾಗಿದೆ. -ಠಿ; 74.24ಕ್ಕೆ ದಿನದ ವಹಿವಾಟು ಮುಗಿಸಿದೆ. ಈ ಮೂಲಕ 17 ತಿಂಗಳ ಹಿಂದಿನ ಮಟ್ಟಕ್ಕೆ ಮುಟ್ಟಿದೆ.
ತೈಲ ದರ ಇಳಿಕೆ
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಗುರುವಾರ ಶೇ. 5.50 ದರ ಕುಸಿತವಾಗಿದ್ದು, ಬ್ರೆಂಟ್ ಕಚ್ಚಾತೈಲ ದರ ಪ್ರತಿ ಬ್ಯಾರೆಲ್ಗೆ 33.82ಕ್ಕೆ ಇಳಿದಿದೆ. ಸೌದಿ ಅರೇಬಿಯಾ,ರಷ್ಯಾದ ತೈಲ ಕಂಪನಿಗಳ ಜಗಳ ಮತ್ತು ಕೊರಾನಾ ವೈರಸ್ ಕಾರಣ ಬೇಡಿಕೆ ತಗ್ಗಿದ್ದರಿಂದ ಕಳೆದ ಸೋಮವಾರ ಪ್ರತಿ ಬ್ಯಾರೆಲ್ ಕಚ್ಚಾ ತೈಲ 30 ಡಾಲರ್ನ ಆಸುಪಾಸಿಗೆ ಮುಟ್ಟಿತ್ತು. ಭಾರತದಲ್ಲಿ ಪೆಟ್ರೋಲ್ ದರ 15 ಪೈಸೆ ಮತ್ತು ಡೀಸೆಲ್ ದರ 12 ಪೈಸೆ ಇಳಿಕೆಯಾಗಿದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ -ಠಿ; 70.14 ಮತ್ತು ಡೀಸೆಲ್ ದರ -ಠಿ; 62.89 ಇತ್ತು. ಫೆ.27ರಿಂದ ತೈಲದ ಇಳಿಕೆಯ ಹಾದಿಯಲ್ಲಿದ್ದು, ಈವರೆಗೆ ಪೆಟ್ರೋಲ್ ದರದಲ್ಲಿ -ಠಿ; 1.75, ಡೀಸೆಲ್ ಬೆಲೆ -ಠಿ; 1.62 ತಗ್ಗಿದೆ.
ಬಂಗಾರ -ಠಿ; 128 ಅಗ್ಗ
ಷೇರುಪೇಟೆ, ತೈಲ ಮಾರುಕಟ್ಟೆಗಳು ತಲ್ಲಣಿಸಿದರೂ ಚಿನಿವಾರಪೇಟೆಯಲ್ಲಿ ಇದರ ಪರಿಣಾಮ ಅಷ್ಟಾಗಿ ಕಂಡಿಲ್ಲ. ಶುದ್ಧ ಬಂಗಾರದ ದರ -ಠಿ; 128 ಇಳಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ -ಠಿ; 44,490 ಬೆಲೆ ಇತ್ತು. ಬೆಳ್ಳಿ ದರ -ಠಿ; 302 ತಗ್ಗಿದ್ದು, ಪ್ರತಿ ಕೆ.ಜಿ. -ಠಿ; 46,868ಕ್ಕೆ ಇಳಿದಿದೆ.