ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಹರಿದು ಬರುತ್ತಿದೆ ಬಂಡವಾಳ

YES BANK PHOTO F
Published on

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಬಂಡವಾಳ ಹೂಡಲು ಇನ್ನಷ್ಟು ಖಾಸಗಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಭಾನುವಾರ ಮುಂದೆ ಬಂದಿವೆ.

ತಲಾ -ಠಿ; 300 ಕೋಟಿ ಹೂಡುವುದಾಗಿ ಬಂಧನ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ ತಿಳಿಸಿವೆ.  250 ಕೋಟಿ ರೂಪಾಯಿ ಹೂಡಲು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ನಿರ್ಧರಿಸಿದೆ.  7,250 ಕೋಟಿ  ರೂ.ಹೂಡಲು ಎಸ್​ಬಿಐ ಈಗಾಗಲೇ ನಿರ್ಧರಿಸಿದೆ. ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ತಲಾ  1 ಸಾವಿರ ಕೋಟಿ ರೂ., ಆಕ್ಸಿಸ್ ಬ್ಯಾಂಕ್ - ರೂ., 600 ಕೋಟಿ ಮತ್ತು ಕೊಟಕ್ ಮಹಿಂದ್ರ ಬ್ಯಾಂಕ್  500 ಕೋಟಿ ರೂ. ಹೂಡುವುದಾಗಿ ಪ್ರಕಟಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net