ಹುಂಡೈ ವೆನ್ಯೂಗೆ ವರ್ಷದ ಕಾರು ಪ್ರಶಸ್ತಿ

CAR
Published on

ಬೆಂಗಳೂರು:  ಹುಂಡೈ ಮೋಟಾರ್ ಇಂಡಿಯಾ ಲಿ.ನ ವೆನ್ಯೂ ಕಾರು ‘ಭಾರತೀಯ ವರ್ಷದ ಕಾರು ಪ್ರಶಸ್ತಿ- 2020’ ಪಡೆದಿದ್ದು, ದೇಶಾದ್ಯಂತ ಹುಂಡೈ ಶೋರೂಂಗಳಲ್ಲಿ ಗ್ರಾಹಕರೊಂದಿಗೆ ಸಂಭ್ರಮ ಆಚರಿಸಲಾಯಿತು.

ವರ್ಷದ ಕಾರು ಪ್ರಶಸ್ತಿ ಗೆಲ್ಲುವ ಮೂಲಕ ಹುಂಡೈ ವೆನ್ಯೂ ಹೆಚ್ಚು ಆದ್ಯತೆಯ ಕಾಂಪ್ಯಾಕ್ಟ್ ಎಸ್​ಯುುವಿಯಾಗಿ ಹೊರ ಹೊಮ್ಮಿದೆ. ಸ್ಪೋರ್ಟಿ ವಿನ್ಯಾಸ ಹೊಂದಿರುವ ವೆನ್ಯೂ ಕಾರು 1 ಲಕ್ಷಕ್ಕೂ ಹೆಚ್ಚಿನ ಬುಕ್ಕಿಂಗ್ ಆಗಿದ್ದು, 70 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ವೆನ್ಯೂ ಮಾದರಿಯಲ್ಲೇ ಹಿಂದಿನ ವರ್ಷಗಳಲ್ಲಿ ಹುಂಡೈನ ವೆರ್ನಾ, ಕ್ರೆಟಾ, ಎಲೈಟ್ ಐ20, ಗ್ರಾ್ಯಂಡ್ ಐ10 ಮತ್ತು ಐ10 ಕಾರುಗಳು ಕೂಡ ಐಸಿಒಟಿವೈ ಪ್ರಶಸ್ತಿಗೆ ಭಾಜನವಾಗಿವೆ. ಹುಂಡೈ ವೆನ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ವಿಶ್ವದ ವರ್ಷದ ಕಾರು ಪ್ರಶಸ್ತಿಗೂ ನಾಮಕರಣಗೊಂಡಿದೆ. ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು ಎಂದು ಎನ್ನುವ ಹುಂಡೈ ಮೋಟಾರ್ ಇಂಡಿಯಾ ಲಿ.ನ ವಿಕಾಸ್ ಜೈನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net