ಬೆಂಗಳೂರು:
ಪಾದರಕ್ಷೆಗಳ ಬ್ರಾಂಡ್ ಆಗಿರುವ ವಾಕರೂ ವಾಕ್. ವಾಕ್. ವಾಕ್. ವಾಕ್ ವಿತ್ ವಾಕರೂ ಎಂಬ ಹೊಸ ಜಾಹೀರಾತು ಅಭಿಯಾನವನ್ನು ಬಿಡುಗಡೆಗೊಳಿದ್ದು, ಈ ಜಾಹೀರಾತಿನಲ್ಲಿ ಖ್ಯಾತ ಬಾಲಿವುಡ್ ನಟ ವರುಣ್ ಧವನ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೋರ್ಟ್ ರೂಮಿನಲ್ಲಿ ನಡೆಯುವ ಈ ಜಾಹೀರಾತಿನಲ್ಲಿ ಅತ್ಯುತ್ತಮ ಬಾಳಿಕೆ, ಉತ್ಕೃಷ್ಟ ಸೌಕರ್ಯ ಮತ್ತು ಅನುಕೂಲತೆ ಒದಗಿಸುವ ವಾಕರೂ+ ಪಾದರಕ್ಷೆಗಳ ಸಂಗ್ರಹವನ್ನು ಪ್ರದರ್ಶಿಸಲಾಗುತ್ತದೆ.
ಈ ಕುರಿತು ಮಾತನಾಡಿರುವ ವಾಕರೂ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವಿ. ನೌಶಾದ್ ಅವರು, ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ವರುಣ್ ಧವನ್ ಅವರು ನಮ್ಮ ವಾಕರೂ+ ಸಂಗ್ರಹವನ್ನು ಹೆಚ್ಚಿನ ಜನರಿಗೆ ತಲುಪಿಸಲಿದ್ದಾರೆ. ಈ ಜಾಹೀರಾತು ಬಹಳ ದಿನಗಳ ಕಾಲ ಜನರ ಮನಸ್ಸಲ್ಲಿ ಉಳಿಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ವಾಕರೂ ಪ್ಲಸ್ ಸಂಗ್ರಹ ಅತ್ಯಾಧುನಿಕ ಕುಶನಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಗ್ರಾಹಕರಿಗೆ ನಿರಾಳವಾದ ನಡಿಗೆಯ ಅನುಭವವನ್ನು ಒದಗಿಸುತ್ತದೆ ಮತ್ತು ದೈನಂದಿನ ಅಗತ್ಯಕ್ಕೆ ಪೂರಕವಾಗಿ ಮೂಡಿ ಬಂದಿದೆ.