

ನವದೆಹಲಿ: ದೃಷ್ಟಿ ಹೀನರಿಗೆ, ದೃಷ್ಟಿ ದೋಷ ಇರುವವರಿಗೆ ನೋಟುಗಳನ್ನು ಗುರುತಿಸಲು ಸಾಧ್ಯವಾಗುವಂತಹ ಮೊಬೈಲ್ ಆ್ಯಪ್ವೊಂದನ್ನು ಆರ್ಬಿಐ ಇಂದು ಬಿಡುಗಡೆ ಮಾಡಿದೆ.
ಅಂದರೆ ದೃಷ್ಟಿ ಸರಿಯಾಗಿ ಇರದೆ ಇರುವವರು, ಭಾಗಶಃ ಕುರುಡು ಸಮಸ್ಯೆಯಿಂದ ಬಳಲುತ್ತಿರುವವರು ಈ ಆ್ಯಪ್ನಿಂದ ಸುಲಭವಾಗಿ ನೋಟುಗಳನ್ನು ಗುರುತಿಸಬಹುದು.
ಒಂದು ಸಲ ಈ ಅಪ್ಲಿಕೇಶ್ನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಆಫ್ಲೈನ್ನಲ್ಲಿ ಕೂಡ ಇದು ಕೆಲಸ ಮಾಡುತ್ತದೆ ಎಂದು ಆರ್ಬಿಐ ತಿಳಿಸಿದೆ.
ಈ ಆ್ಯಪ್ ಹೆಸರು ಎಂಎಎನ್ಐ (MANI-Mobile Aided Note Identifier) -ಮೊಬೈಲ್ ಸಹಾಯದಿಂದ ನೋಟುಗಳನ್ನು ಗುರುತಿಸುವುದು ಎಂದು ಇದರ ಅರ್ಥ. ಈ ಆ್ಯಪ್ನಲ್ಲಿರುವ ಕ್ಯಾಮರಾ ನೋಟನ್ನು ಸ್ಕ್ಯಾನ್ ಮಾಡುತ್ತದೆ. ಬಳಿಕ ಅದು ಎಷ್ಟರ ಬೆಲೆಯ ನೋಟು ಎಂದು ಆಡಿಯೋದ ಮೂಲಕ ಹೇಳುತ್ತದೆ. ಈ ಆಡಿಯೋ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರಲಿದೆ. ಇದರಿಂದ ದೃಷ್ಟಿದೋಷ ಇರುವವರಿಗೆ ತುಂಬ ಅನುಕೂಲ ಆಗಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
MANI ಆ್ಯಪ್ ಆಂಡ್ರಾಯ್ಡ್ ಮತ್ತು iOs ಆಪರೇಟಿಂಗ್ ಸಿಸ್ಟಂಗಳೆರಡರಲ್ಲೂ ಲಭ್ಯವಿದೆ.
ಇಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ( ಏಜೆನ್ಸೀಸ್)