ಕೇಂದ್ರ ಬಜೆಟ್ 2020: ನಿರ್ವಿಕ್​ ಸ್ಕೀಮ್- ರಫ್ತುದಾರರಿಗೆ ಗರಿಷ್ಠ ವಿಮೆ ಸೌಲಭ್ಯ

nirvik 1 FEB 20
Published on

ನವದೆಹಲಿ: ರಫ್ತುದಾರರಿಗೆ ಗರಿಷ್ಠ ವಿಮೆ ಸೌಲಭ್ಯ ಖಾತರಿಗೊಳಿಸುವ ನಿರ್ವಿಕ್ ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಈ ಸಲದ ಬಜೆಟ್​ನಲ್ಲಿ ಘೋಷಿಸಿದೆ. ನಿರ್ವಿಕ್ ಸ್ಕೀಮ್ ಎಂದರೆ ನಿರಾಯತ್​ ರಿನ್ ವಿಕಾಸ್ ಯೋಜನಾ (Nirvik - Niryat Rin Vikas Yojana) ಸಣ್ಣ ರಫ್ತುದಾರರಿಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮೆ ರಕ್ಷಣೆ ಒದಗಿಸುವ ಕೆಲಸ ಮಾಡುತ್ತದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಲದ ಬಜೆಟ್ ಮಂಡಿಸುತ್ತ ಇದನ್ನು ಘೋಷಿಸಿದ್ದಾರೆ. ಕಾಮರ್ಸ್​ ಮಿನಿಸ್ಟ್ರಿ ಅಧೀನ ಈ ಸ್ಕೀಮ್ ಸಿದ್ಧವಾಗಿದ್ದು, ಇದನ್ನು ಎಕ್ಸ್​ಪೋರ್ಟ್​ ಕ್ರೆಡಿಟ್ ಇನ್ಶೂರೆನ್ಸ್​ ಸ್ಕೀಮ್ (ಇಸಿಐಎಸ್​) ಎಂದೂ ಗುರುತಿಸುತ್ತಾರೆ. ಈ ಸೌಲಭ್ಯದ ಪ್ರಕಾರ, ಪ್ರಿನ್ಸಿಪಲ್ ಮತ್ತು ಬಡ್ಡಿಯ ಶೇಕಡ 90ರ ತನಕ ವಿಮೆಯ ರಕ್ಷಣೆ ಸಿಗುತ್ತದೆ.

ಕೆಲವು ಪ್ರಮುಖ ಸೆಕ್ಟರ್​ಗಳ ರಫ್ತುದಾರರಿಗೆ ಈ ಸ್ಕೀಮ್ ಪ್ರಕಾರ ಸಬ್ಸಿಡಿ ದರದ ಪ್ರೀಮಿಯಂ ಸೌಲಭ್ಯ ಸಿಗಲಿದೆ. ದ ಎಕ್ಸ್​ಪೋರ್ಟ್​ ಕ್ರೆಡಿಟ್​ ಗ್ಯಾರೆಂಟಿ ಕಾರ್ಪೊರೇಷನ್​ ಸದ್ಯ ಶೇಕಡ 60ರ ತನಕದ ನಷ್ಟಕ್ಕೆ ಕ್ರೆಡಿಟ್ ಗ್ಯಾರೆಂಟಿ ನೀಡುತ್ತಿದೆ. ದೇಶದ ಎಕ್ಸ್​ಪೋರ್ಟ್​ ಪ್ರಮಾಣ 2019-20ರ ಏಪ್ರಿಲ್​-ಡಿಸೆಂಬರ್ ಅವಧಿಯಲ್ಲಿ ಶೇಕಡ 1.96 ಇಳಿಕೆಯಾಗಿದ್ದು, 239.29 ಶತಕೋಟಿ ಡಾಲರ್ ತಲುಪಿದೆ. ಇದೇ ವೇಳೆ ಇಂಪೋರ್ಟ್​ ಪ್ರಮಾಣ ಶೇಕಡ 8.9 ಇಳಿದು 357.39 ಶತ ಕೋಟಿ ಡಾಲರ್ ತಲುಪಿದೆ. ಇದರೊಂದಿಗೆ ಟ್ರೇಡ್ ಡೆಫಿಸಿಟ್​ 118.10 ಶತ ಕೋಟಿ ಡಾಲರ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net