

ನವದೆಹಲಿ: ಪೆನ್ಶನ್ ಫಂಡ್ ರೆಗುಲೇಟರಿ ಸಂಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಪಿಎಫ್ಆರ್ಡಿಎ ಆ್ಯಕ್ಟ್ ತಿದ್ದುಪಡಿಗೆ ಕೇಂದ್ರ ಸರ್ಕಾರ ಒಲವು ತೋರಿದೆ. ಈ ವಿಷಯವನ್ನು ಬಜೆಟ್ ಭಾಷಣದಲ್ಲಿ ಸಂಸತ್ತಿಗೆ ತಿಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರಿ ಉದ್ಯೋಗಿಗಳ ಪೆನ್ಶನ್ ಟ್ರಸ್ಟನ್ನು ಪಿಎಫ್ಆರ್ಡಿಎಯಿಂದ ಪ್ರತ್ಯೇಕಿಸಲಾಗುವುದು ಎಂದರು.
ಪೆನ್ಶನ್ ಫಂಡ್ ರೆಗುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ(ಪಿಎಫ್ಆರ್ಡಿಎ) ಆ್ಯಕ್ಟ್ ಗೆ ಸೂಕ್ತ ತಿದ್ದುಪಡಿ ಮಾಡಲಾಗುತ್ತಿದೆ. ಈ ಮೂಲಕ ಪಿಎಫ್ಆರ್ಡಿಎ ಯಿಂದ ನ್ಯಾಷನಲ್ ಪೆನ್ಶನ್ ಟ್ರಸ್ಟ್ ಫಾರ್ ಗವರ್ನಮೆಂಟ್ ಎಂಪ್ಲಾಯೀಸ್ ಅನ್ನು ಪ್ರತ್ಯೇಕಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಉದ್ಯೋಗದಲ್ಲಿರುವಾಗ ವರ್ಗಾವಣೆಯಾದರೆ ಸ್ಥಳಾಂತರಗೊಳ್ಳುವ ಮತ್ತು ಪೂರಕ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಆಟೋ ಎನ್ರೋಲ್ಮೆಂಟ್ ಫೆಸಿಲಿಟಿ ಮೂಲಕ ಸಾರ್ವತ್ರಿಕ ಪೆನ್ಶನ್ ಕವರೇಜ್ ಉದ್ಯೋಗಿಗೆ ಸಿಗುವಂತೆ ಮಾಡಲಾಗುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್)