ಕೇಂದ್ರ ಬಜೆಟ್ 2020: ಐದು ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆ ಆಗಲು ಸ್ವಚ್ಛ, ಸಮೃದ್ಧ ಆರ್ಥಿಕ ವ್ಯವಸ್ಥೆ ಬೇಕು ಎಂದ ವಿತ್ತ ಸಚಿವೆ

financial sector 1 FEB 20
Published on

ನವದೆಹಲಿ: ನಮ್ಮ ದೇಶದ ಆರ್ಥಿಕತೆ ಐದು ಲಕ್ಷ ಕೋಟಿ ಡಾಲರ್​ನ ಆರ್ಥಿಕತೆ ಆಗಬೇಕಾದರೆ ಸ್ವಚ್ಛ, ಸಮೃದ್ಧ ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ಶನಿವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು,ಎಲ್ಲ ವಾಣಿಜ್ಯ ಬ್ಯಾಂಕುಗಳ ಆರೋಗ್ಯದ ಮೇಲೆ ನಿಗಾ ವಹಿಸಲು ಪರಿಣಾಮಕಾರಿ ವ್ಯವಸ್ಥೆ ಚಾಲ್ತಿಗೆ ಬಂದಿದೆ. ಇದು ಬ್ಯಾಂಕುಗಳ ಆರೋಗ್ಯ ಅಷ್ಟೇ ಅಲ್ಲ, ಠೇವಣಿದಾರರ ಹಣವನ್ನೂ ಜೋಪಾನಮಾಡುತ್ತದೆ ಎಂದರು.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳಿಗೆ 3.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಸೇರಿಸಲಾಗಿದೆ ಎಂದ ಅವರು, ಬ್ಯಾಂಕುಗಳಲ್ಲಿ ಖಾಸಗಿ ಬಂಡವಾಳ ಹೆಚ್ಚಿರಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಪೆನ್ಶನ್​ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್​ಮೆಂಟ್​ ಅಥಾರಿಟಿ(ಪಿಎಫ್​ಆರ್​ಡಿಎ)ಯಿಂದ ಸರ್ಕಾರಿ ಪೆನ್ಶನ್ ಟ್ರಸ್ಟ್​ ಅನ್ನು ಪ್ರತ್ಯೇಕಿಸುವ ವಿಚಾರವನ್ನೂ ಅವರು ಪ್ರಕಟಿಸಿದರು. ಇದೇ ರೀತಿ, ಐಡಿಬಿಐ ಬ್ಯಾಂಕ್​ನ ಷೇರುಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನೂ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net