

ಜಾಗತಿಕ ಐಪಿಒ ಮಾರುಕಟ್ಟೆಯಲ್ಲಿ ಕಳೆದ ವರ್ಷ 2,388 ಐಪಿಒಗಳು ಬಿಡುಗಡೆಯಾಗಿದ್ದು, 453.3 ಶತಕೋಟಿ ಡಾಲರ್ ಬಂಡವಾಳ ಕ್ರೋಡಿಕರಣವಾಗಿತ್ತು. 2020ಕ್ಕೆ ಹೋಲಿಸಿದರೆ ಇದು ಶೇ.60 ಹೆಚ್ಚು. ಭಾರತದಲ್ಲಿ 63 ಕಂಪನಿಗಳು 1.19 ಲಕ್ಷ ಕೋಟಿ ರೂಪಾಯಿಯನ್ನು ಐಪಿಒ ಮೂಲಕ ಸಂಗ್ರಹಿಸಿದ್ದವು. ಇದು 2020ಕ್ಕೆ ಹೋಲಿಸಿದರೆ (26,628 ಕೋಟಿ ರೂ.) ನಾಲ್ಕು ಪಟ್ಟು ಹೆಚ್ಚು. ಈ ವರ್ಷದ ಟ್ರೆಂಡ್ ಈಗಾಗಲೆ ಬಹಿರಂಗವಾಗಿದ್ದು, ಐಪಿಒ ವರ್ಷಧಾರೆ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
| ಉಮೇಶ್ ಕುಮಾರ್ ಶಿಮ್ಲಡ್ಕ ಬೆಂಗಳೂರು
ಸಾರ್ವಜನಿಕ ಹೂಡಿಕೆದಾರರಿಂದ ನಿಧಿ ಸಂಗ್ರಹಿಸುವುದಕ್ಕಾಗಿ ಕಂಪನಿಗಳು ಐಪಿಒಗಳನ್ನು ಬಿಡುಗಡೆ ಮಾಡುವ ಪರಿಪಾಠ ನಾಲ್ಕೂವರೆ ದಶಕಗಳಿಂದ ಚಾಲ್ತಿಯಲ್ಲಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಐಪಿಒಗಳ ಸಂಖ್ಯೆ ಮತ್ತು ನಿಧಿ ಸಂಗ್ರಹ ಪ್ರಮಾಣದಲ್ಲಿ ಭಾರಿ ಏರಿಕೆ ಆಗಿದೆ. ಕಾರಣ ಇಷ್ಟೆ & ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಗಳ ಪೈಕಿ ಭಾರತವೂ ಒಂದು. ಡಿಜಿಟಲ್ ಸೇವೆಗಳನ್ನು ಬಳಸುವ ಪ್ರಮಾಣವೂ ಪ್ರವಾಗಿ ಏರುತ್ತಲೇ ಇದೆ. ಕೋವಿಡ್ 19 ಸಂಕಷ್ಟದಿಂದ ಆಗಿರುವ ಅಡಚಣೆಗಳ ಕಾರಣ ಇದರ ವೇಗ ಇನ್ನಷ್ಟು ಹೆಚ್ಚಾಗಿದೆ. ಡಿಜಿಟಲ್ ಸೇವೆಗಳಿಂದಾಗಿ ಟೆಕ್, ಮಿಡಿಯಾ ಮತ್ತು ಟೆಲಿಕಾಂ (ಟಿಎಂಟಿ) ಕಂಪನಿಗಳ ವ್ಯವಹಾರ ಬಹಳಷ್ಟು ಹೆಚ್ಚಾಗಿದೆ. ಗ್ಲೋಬಲ್ ಡೇಟಾ ಪ್ರಕಟಿಸಿರುವ ವರದಿ ಪ್ರಕಾರ, ಭಾರತದಲ್ಲಿ 2021ರಲ್ಲಿ 15 ಟಿಎಂಟಿ ಕಂಪನಿಗಳು ಇನಿಷಿಯಲ್ ಪಬ್ಲಿಕ್ ಆರಿಂಗ್ (ಐಪಿಒ) ಬಿಡುಗಡೆ ಮಾಡಿವೆ. ಪೇಟಿಎಂ (ಫಿನ್ಟೆಕ್), ಜೊಮ್ಯಾಟೊ (ಇಕಾಮರ್ಸ್), ಕಾರ್
ಟ್ರೇಡ್ (ಇಕಾಮರ್ಸ್), ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ (ಫಿನ್ಟೆಕ್), ರೇಟ್ ಗೇನ್ (ಕ್ಲೌಡ್), ಈಸಿ ಟ್ರಿಪ್ (ಇಕಾ ಮರ್ಸ್), ನೈಕಾ (ಇಕಾಮರ್ಸ್) ಮುಂತಾದ ಕಂಪನಿಗಳ ಐಪಿಒಗಳು ಇದರಲ್ಲಿ ಸೇರಿಕೊಂಡಿವೆ. ಭಾರತದ ಐಪಿಒ ಮಾರುಕಟ್ಟೆ ಯಲ್ಲಿ ಕಳೆದ ವರ್ಷದ ಹವಾ ಇನ್ನೂ ಎರಡು ವರ್ಷ ಮುಂದುವರಿಯಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಐಪಿಒ ಮಾರುಕಟ್ಟೆಯ ಅತಿದೊಡ್ಡದು ಎಂಬ ಕೀರ್ತಿಯೊಂದಿಗೆ ಎಲ್ಐಸಿ ಐಪಿಒ ಮಾರು ಕಟ್ಟೆ ಪ್ರವೇಶಕ್ಕೆ ಸಜ್ಜಾಗಿದ್ದು, ಇಂದು ಬಿಡ್ಡಿಂಗ್ ಕೊನೆಗೊಳ್ಳುತ್ತಿದೆ.
ಪ್ರಮುಖ ಐಪಿಒಗಳು
ಪ್ರಸಕ್ತ ಹಣಕಾಸು ವರ್ಷ ಮಾರುಕಟ್ಟೆ ಪ್ರವೇಶಿಸುವ ಐಪಿಒಗಳ ಪೈಕಿ ನವಿ ಟೆಕ್ನಾಲಜೀಸ್, ಪೈನ್ ಲ್ಯಾಬ್ಸ್, ಸ್ನಾಪ್ಡೀಲ್, ಡೆಲ್ಹಿವರಿ, ಡ್ರೂಮ್, ಾಮ್ರ್ಈಸಿ, ಓಯೋ ರೂಮ್ಸ್, ಫ್ಲಿಪ್ಕಾರ್ಟ್, ಓಲಾ ಕ್ಯಾಬ್ಸ್, ಬೈಜುಸ್, ಸ್ವಿಗ್ಗಿ ಪ್ರಮುಖವಾದವು. ಅವುಗಳ ತಯಾರಿ ಯಾವ ಹಂತದಲ್ಲಿದೆ ಎಂಬ ವಿವರವೂ ಇಲ್ಲಿದೆ.
ನವಿ ಟೆಕ್ನಾಲಜೀಸ್ - ಫಿನ್ಟೆಕ್ ನವೋದ್ಯಮವಾಗಿದ್ದು, ಗ್ರಾಹಕರಿಗೆ ವಿಮೆ, ಸಾಲ ಉತ್ಪನ್ನಗಳನ್ನು ಒದಗಿಸುತ್ತದೆ. ಇತ್ತೀಚೆಗಷ್ಟೇ ಐಪಿಒ ಬಿಡುಗಡೆಗೆ ಅರ್ಜಿ ಸಲ್ಲಿಸಿದೆ. ನವಿ ಫಿನ್ಸರ್ವ್ ಪೆವೇಟ್ ಲಿಮಿಟೆಡ್ ಮತ್ತು ನವಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ಗಳಲ್ಲಿ ಹೂಡಿಕೆಗೆ ಈ ಐಪಿಒ ಅವಕಾಶ ಮಾಡಿಕೊಡಲಿದೆ.
ಪೈನ್ ಲ್ಯಾಬ್ಸ್ - ಡಿಜಿಟಲ್ ಪಾವತಿ ಸೇವೆ ಒದಗಿಸುವ ಕಂಪನಿ ಇದಾಗಿದ್ದು, 2022ರ ಜನವರಿಯಲ್ಲೇ ಅಮೆರಿಕದ ಷೇರುಪೇಟೆಯಲ್ಲಿ ಲಿಸ್ಟಿಂಗ್ಗಾಗಿ ಅರ್ಜಿ ಸಲ್ಲಿಸಿದೆ. ಜೂನ್ ಒಳಗೆ ಈ ಐಪಿಒ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಪೈನ್ಲ್ಯಾಬ್ಸ್ನ ಮಾರುಕಟ್ಟೆ ಮೌಲ್ಯ 5.5 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.
ಸ್ನಾಪ್ಡೀಲ್- ಇದು ಆನ್ಲೈನ್ ರಿಟೇಲ್ ಕಂಪನಿ. ಕಳೆದ ವರ್ಷ ಡಿಸೆಂಬರ್ನಲ್ಲೇ 165 ದಶಲಕ್ಷ ಡಾಲರ್ ಹಣ ಸಂಗ್ರಹ ಮಾಡುವ ಉದ್ದೇಶದೊಂದಿಗೆ ಐಪಿಒ ಬಿಡುಗಡೆಗೆ ಅರ್ಜಿ ಸಲ್ಲಿಸಿದೆ. ಲಾಜಿಸ್ಟಿಕ್ಸ್ ಸಾಮರ್ಥ್ಯ ವೃದ್ಧಿ ಮತ್ತು ಕಂಪನಿಯ ಟೆಕ್ ಮೂಲಸೌಕರ್ಯ ಸುಧಾರಣೆಗಾಗಿ ಂಡ್ ಸಂಗ್ರಹಿಸುತ್ತಿದೆ. ಅಲ್ಲದೆ, ಮಾರುಕಟ್ಟೆ ಮೌಲ್ಯವನ್ನು 200 ಕೋಟಿ ಡಾಲರ್ಗೆ ಏರಿಸಲು ಮುಂದಾಗಿದೆ.
ಡೆಲ್ಹಿವರಿ - ಇಕಾಮರ್ಸ್ ಲಾಜಿಸ್ಟಿಕ್ಸ್ ಕಂಪನಿ 2021ರ ನವೆಂಬರ್ನಲ್ಲೇ ಐಪಿಒ ಬಿಡುಗಡೆಗೆ ಅರ್ಜಿ ಸಲ್ಲಿಸಿದೆ. ಮುಂದಿನ ಮೂರು ತಿಂಗಳ ಒಳಗೆ ಷೇರುಪೇಟೆ ಲಿಸ್ಟ್ ಸೇರ್ಪಡೆಯಾಗುವ ನಿರೀೆಯಲ್ಲಿದೆ ಕಂಪನಿ. 998 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸುವ ಉದ್ದೇಶ ಮತ್ತು ಕಂಪನಿಯ ಮಾರುಕಟ್ಟೆ ಮೌಲ್ಯವನ್ನು 500 ಕೋಟಿ ಡಾಲರ್ಗೆ ಏರಿಸುವ ಕಡೆಗೆ ಗಮನಹರಿಸಿದೆ. ಈ ಕಂಪನಿಯ ಐಪಿಒ ಪ್ರಸ್ತಾವನೆಗೆ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆ್ ಇಂಡಿಯಾ (ಸೆಬಿ ) ಅನುಮೋದನೆ ನೀಡಿದೆ.
ಡ್ರೂಮ್ - ಈ ಆನ್ಲೈನ್ ಆಟೊಮೊಬೈಲ್ ಮಾರ್ಕೆಟ್ ಪ್ಲೇಸ್ 2021ರ ನವೆಂಬರ್ನಲ್ಲಿ ಐಪಿಒ ಬಿಡುಗಡೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಈ ಹಣಕಾಸು ವರ್ಷದಲ್ಲೇ ಐಪಿಒ ಮಾರುಕಟ್ಟೆ ಪ್ರವೇಶಿಸಲು ಇದು ಸಜ್ಜಾಗಿದೆ. 262 ದಶಲಕ್ಷ ಡಾಲರ್ ಹಣ ಸಂಗ್ರಹಿಸುವುದು ಇದರ ಉದ್ದೇಶ. ಈ ಹಣವನ್ನು ಕಂಪನಿಯ ಬೆಳವಣಿಗೆಗೆ ಬಳಸಲು ತೀರ್ಮಾನಿಸಿದೆ.
ಫಾಮ್ರ್ಈಸಿ- ಇದು ಆನ್ಲೈನ್ ಫಾರ್ಮಸಿ ರಿಟೇಲರ್ ಕಂಪನಿ ಆಗಿದ್ದು, 2021ರ ನವೆಂಬರ್ನಲ್ಲೇ ಐಪಿಒಗೆ ಅರ್ಜಿ ಸಲ್ಲಿಸಿದೆ. 2022ರ ಫೆಬ್ರವರಿಯಲ್ಲಿ ಈ ಕಂಪನಿಯ ಐಪಿಒ ಪ್ರಸ್ತಾವನೆಯನ್ನು ಸೆಬಿ ಅನುಮೋದಿಸಿದೆ. ಈ ಐಪಿಒ ಮೂಲಕ 820 ದಶಲಕ್ಷ ಡಾಲರ್ ಸಂಗ್ರಹಿಸುವ ಉದ್ದೇಶ ಹೊಂದಿದೆ. ಇದಲ್ಲದೆ, ಕಂಪನಿಯ ಮಾರುಕಟ್ಟೆ ಮೌಲ್ಯವನ್ನು 900 ಕೋಟಿ ಡಾಲರ್ಗೆ ಏರಿಸಲು ಪ್ರಯತ್ನಿಸುತ್ತಿದೆ.
ಓಯೋ ರೂಮ್ಸ್ - ಕೈಗೆಟಕುವ ದರದಲ್ಲಿ ಲಾಡ್ಜಿಂಗ್ ಸೇವೆ ಒದಗಿಸುವ ಕಂಪನಿ. 2021ರ ಅಕ್ಟೋಬರ್ನಲ್ಲೇ ಐಪಿಒ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ವರ್ಷದ ಮೊದಲ ಅರ್ಧದಲ್ಲೇ ಐಪಿಒ ಮಾರುಕಟ್ಟೆ ಪ್ರವೇಶಿಸುವ ಇರಾದೆ ಹೊಂದಿದೆ. ಈ ಐಪಿಒ ಮೂಲಕ 1.2 ಶತಕೋಟಿ ಡಾಲರ್ ಹಣ ಸಂಗ್ರಹಿಸುವುದಲ್ಲದೆ, 900 ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದುವ ಇರಾದೆಯೊಂದಿಗೆ ಮುಂದಡಿ ಇರಿಸಿದೆ.
ಓಲಾ ಕ್ಯಾಬ್ಸ್ - ಟ್ಯಾಕ್ಸಿ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿ. ಈ ವರ್ಷ ಮೊದಲ ಭಾಗದಲ್ಲೇ ಐಪಿಒ ಮಾರುಕಟ್ಟೆ ಪ್ರವೇಶಿಸಲು ತಯಾರಿ ನಡೆಸಿದೆ. ಐಪಿಒ ಮೂಲಕ 200 ಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾಗಿದೆ. ಇತ್ತೀಚೆಗಷ್ಟೇ ಸೆಗನ್ಟಿ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಮತ್ತು ಇತರರಿಂದ 200 ದಶಲಕ್ಷ ಡಾಲರ್ ಹೂಡಿಕೆ ಮಾಡಿಸಿಕೊಂಡ ಕಂಪನಿ, ತನ್ನ ಮಾರುಕಟ್ಟೆ ಮೌಲ್ಯವನ್ನು 500 ಕೋಟಿ ಡಾಲರ್ಗೆ ಏರಿಸಲು ಮುಂದಾಗಿದೆ.
ಸ್ವಿಗ್ಗಿ - ಆಹಾರ ಉತ್ಪನ್ನ ವಿತರಣಾ ಕಂಪನಿ. 2023ರಲ್ಲಿ ಐಪಿಒ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. 800 ದಶಲಕ್ಷ ಡಾಲರ್ ಸಂಗ್ರಹದ ಗುರಿ ಹಾಕಿಕೊಂಡಿದೆ. ಈ ವರ್ಷ ಜನವರಿಯಲ್ಲಿ ಇದರ ಮಾರುಕಟ್ಟೆ ಮೌಲ್ಯ 500 ಕೋಟಿ ಡಅಲರ್ ಆಗಿತ್ತು. 700 ದಶಲಕ್ಷ ಡಾಲರ್ ಹಣವನ್ನು ಸ್ಟ್ಾಬ್ಯಾಂಕ್, ವಿಷನ್ ಂಡ್, ಪ್ರೋಸಸ್ ವೆಂಚರ್ಸ್ ಮತ್ತು ಇತರರಿಂದ ಹೂಡಿಕೆ ಮಾಡಿಸಿಕೊಂಡಿದೆ.