ಅಕ್ಟೋಬರ್​ನಿಂದ ಟಿವಿಗಳು ದುಬಾರಿ

TV
Published on

ನವದೆಹಲಿ: ಟಿವಿಗಳ ತಯಾರಿಕೆಗೆ ಪ್ರಮುಖವಾಗಿ ಬಳಸುವ ಓಪನ್ ಸೆಲ್ ಪ್ಯಾನೆಲ್​ಗಳ ಮೇಲಿನ ಶೇಕಡ 5 ಆಮದು ಸುಂಕಕ್ಕೆ ಕಳೆದ ವರ್ಷದಿಂದ ನೀಡಲಾಗಿದ್ದ ವಿನಾಯಿತಿ ಅವಧಿ ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗುವುದರಿಂದ ಟಿವಿಗಳ ಬೆಲೆ ಅಕ್ಟೋಬರ್​ನಿಂದ ಏರಿಕೆಯಾಗುವ ಸಾಧ್ಯತೆ ಇದೆ.

ಓಪನ್ ಸೆಲ್ ಪ್ಯಾನೆಲ್​ಗಳ ಬೆಲೆ ಈಗಾಗಲೇ ಶೇಕಡ 50 ಹೆಚ್ಚಾಗಿರುವುದರಿಂದ ಒತ್ತಡದಲ್ಲಿರುವ ಟಿವಿ ಉದ್ಯಮ ಕೇಂದ್ರದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. 32 ಇಂಚಿನ ಓಪನ್ ಸೆಲ್ ಪ್ಯಾನೆಲ್ ಬೆಲೆ 34 ಡಾಲರ್​ನಿಂದ 60 ಡಾಲರ್​ಗೆ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಆಮದು ಸುಂಕದ ವಿನಾಯಿತಿ ಅವಧಿಯನ್ನು ವಿಸ್ತರಿಸುವ ಪರವಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net