ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆ: ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ?

Tomato
Published on

ನವದೆಹಲಿ: ಬಹುತೇಕ ಎಲ್ಲ ಮಹಾನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 60-70 ರೂಪಾಯಿ ಆಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಬಹುತೇಕ ಮಹಾನಗರಗಳಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಕಳೆದ ತಿಂಗಳು ಕೆಜಿಗೆ 20 ರೂ.ಇದ್ದ ಬೆಲೆ ಇದೀಗ 60 ರೂ.ಗೆ ಏರಿದೆ ಎಂದು ಸಚಿವಾಲಯ ಅಂಕಿಸಂಖ್ಯೆ ಬಿಡುಗಡೆ ಮಾಡಿದೆ.

ಕೆಲವು ಪಟ್ಟಣಗಳಲ್ಲಂತೂ ಟೊಮ್ಯಾಟೊವನ್ನು ಕೆಜಿಗೆ 70-80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಗುರ್​ಗಾಂವ್​, ಗಂಗಟಕ್​, ಸಿಲಿಗುರಿ, ರಾಯ್​ಪುರ್​ಗಳಲ್ಲಿ ಟೊಮ್ಯಾಟೊವನ್ನು ಕೆಜಿಗೆ 70 ರೂ.ನಂತೆ ಮಾರಾಟಮಾಡಲಾಗುತ್ತಿದ್ದು, ಗೋರಖ್​ಪುರ, ಕೋಟಾ, ದಿಮಾಪುರ್​ಗಳಲ್ಲಿ 80 ರೂ.ಇದೆ.

ಹೈದರಾಬಾದ್​ನಲ್ಲಿ ಕೆಜಿಗೆ 37 ರೂ.ಇದೆ. ಚೆನ್ನೈನಲ್ಲಿ ಕೆಜಿಗೆ 40 ರೂ.ಮತ್ತು ಬೆಂಗಳೂರಿನಲ್ಲಿ ಕೆಜಿಗೆ 46 ರೂ.ಗೆ ಟೊಮ್ಯಾಟೊ ಮಾರಾಟವಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಜುಲೈನಿಂದ ಸೆಪ್ಟೆಂಬರ್​ವರೆಗೆ ಸಾಮಾನ್ಯವಾಗಿ ಟೊಮ್ಯಾಟೊ ಬೆಲೆ ಹೆಚ್ಚಾಗಿರುತ್ತದೆ. ಬೇಡಿಕೆ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಹೆಚ್ಚಾಗಿದೆ. ಬೇಡಿಕೆ ಮತ್ತು ಪೂರೈಕೆ ಪ್ರಮಾಣದಲ್ಲಿ ಹೆಚ್ಚಾದಾಗ ಬೆಲೆ ಕಡಿಮೆಯಾಗುತ್ತದೆ ಎಂದು ಸಚಿವಾಲಯ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net