

ಮುಂಬೈ : ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕತೆ ಪರಿಣಾಮ ಷೇರು ಮಾರುಕಟ್ಟೆ ಗುರುವಾರ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 629.12 (ಶೇ.1.65) ಅಂಶ ಏರಿಕೆ ಕಂಡು 38,697.05ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 169.40 (ಶೇ.1.51) ಅಂಶ ಏರಿಕೆ ಕಂಡು 11,416.95ಕ್ಕೆ ವಹಿವಾಟು ಅಂತ್ಯಗೊಳಿಸಿದೆ.
ಗುರುವಾರದ ವಹಿವಾಟಿನಲ್ಲಿ ಇಂಡಸ್ಇಂಡ್ ಬ್ಯಾಂಕ್ ಅತಿದೊಡ್ಡ ಫಲಾನುಭವಿಯಾಗಿದ್ದು, ಅದರ ಷೇರು ಮೌಲ್ಯ ಶೇ.12 ಹೆಚ್ಚಾಗಿದೆ. ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫಿನ್ಸರ್ವ್ ಮತ್ತು ಕೋಟಕ್ ಬ್ಯಾಂಕ್ ಷೇರು ಮೌಲ್ಯ ಏರಿಕೆ ಕಂಡಿದೆ. ಮತ್ತೊಂದೆಡೆ ಐಟಿಸಿ, ಎನ್ಟಿಪಿಸಿ, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಒಎನ್ಜಿಸಿ ಷೇರು ಮೌಲ್ಯ ಇಳಿಕೆ ಕಂಡಿವೆ. ಚಿನ್ನದ ದರ 37 ರೂ. ಏರಿಕೆ ಕಂಡು 10 ಗ್ರಾಂ.ಗೆ 51,389 ರೂ. ತಲುಪಿದೆ.