

ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ಆಡಳಿತ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕರ ಗರಿಷ್ಠ ವಯೋಮಿತಿಯನ್ನು 70 ವರ್ಷಕ್ಕೆ ಹಾಗೂ ಪ್ರವರ್ತಕರ ಗರಿಷ್ಠ ಕಾರ್ಯಾವಧಿಯನ್ನು 10 ವರ್ಷಕ್ಕೆ ನಿಗದಿ ಮಾಡುವ ಕುರಿತು ಆರ್ಬಿಐ ಪ್ರಸ್ತಾವ ಮಾಡಿದೆ.
ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ಪೂರ್ಣಾವಧಿ ನಿರ್ದೇಶಕರು (ಡಬ್ಲ್ಯುಟಿಡಿ) ಪ್ರವರ್ತಕರ ಗುಂಪಿನವರೇ ಆಗಿದ್ದರೆ 10 ವರ್ಷದ ಸೇವೆ ಬಳಿಕ ಹುದ್ದೆಯನ್ನು ಹೊಸ ವೃತ್ತಿಪರರರಿಗೆ ಹಸ್ತಾಂತರಿಸಬೇಕು ಎಂದು ಆರ್ಬಿಐ ತಿಳಿಸಿದೆ.
ಸಿಇಒ ಮತ್ತು ಡಬ್ಲ್ಯುಟಿಡಿ 70 ವರ್ಷದ ನಂತರ ಆ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ. ಅವಶ್ಯವಾದರೆ ಬ್ಯಾಂಕ್ ಮಂಡಳಿಗಳು ನೀಡಲಾಗಿರುವ ಗರಿಷ್ಠ ವಯೋಮಿತಿ ಒಳಗೆ ಇನ್ನೂ ತಗ್ಗಿಸಬಹುದು. ಈ ಕುರಿತು ಜುಲೈ 15ರೊಳಗಾಗಿ ಪ್ರತಿಕ್ರಿಯೆ ನೀಡಿ ಎಂದು ಆರ್ಬಿಐ ಬ್ಯಾಂಕ್ಗಳು ಮತ್ತು ಸಂಬಂಧಿತರಿಗೆ ತಿಳಿಸಿದೆ. ದೇಶೀಯ ಹಣಕಾಸು ವ್ಯವಸ್ಥೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಚೌಕಟ್ಟನ್ನು ಬದಲಾಯಿಸುವುದು ತಮ್ಮ ಉದ್ದೇಶ ಎಂದು ಆರ್ಬಿಐ ತಿಳಿಸಿದೆ. -ಪಿಟಿಐ