ಭಾರತಕ್ಕೆ ಲಗ್ಗೆ ಇಟ್ಟ ಟೆಸ್ಲಾ ಹೊಸ ಕಾರು; ಐಷಾರಾಮಿ 'ಮಾಡೆಲ್ ವೈ ಎಲ್'ನ ಬೆಲೆ ಎಷ್ಟು, ವಿನ್ಯಾಸ ಹೇಗಿದೆ?..Tesla Car

 Tesla Model Y L India Launch
Tesla Model Y L India Launch
Published on
Tesla Model Y L India Launch: ಟೆಸ್ಲಾ ಭಾರತದಲ್ಲಿ ತನ್ನ ಹೊಚ್ಚಹೊಸ, ಎಲ್ಲ ವೈಶಿಷ್ಟ್ಯಗಳನ್ನೊಳಗೊಂಡ 6-ಸೀಟರ್ ಕಾರು 'ಮಾಡೆಲ್ ವೈ ಎಲ್' ಅನ್ನು ಬಿಡುಗಡೆ ಮಾಡಿದೆ. ಮುಂಬೈನ ಬಲ್ಲಾರ್ಡ್ ಪಿಯರ್ ಡೌನ್‌ಟೌನ್ ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಈ ನೂತನ ಕಾರನ್ನು ಅನಾವರಣಗೊಳಿಸಲಾಗಿದ್ದು, ಇದು ಭಾರತದ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಬುಕ್ಕಿಂಗ್​ ಎಂದಿನಿಂದ ಶುರು?

ಗ್ರಾಹಕರು ಇಂದಿನಿಂದಲೇ ಟೆಸ್ಲಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದ್ದು, 2026ರ ಜೂನ್ ತಿಂಗಳಿನಿಂದ ಕಾರುಗಳ ವಿತರಣೆ ಭಾರತದಾದ್ಯಂತ ಶುರುವಾಗಲಿದೆ.
ಈ ಹೊಸ ಮಾಡೆಲ್ ವೈ ಎಲ್ ಕಾರು, ಕುಟುಂಬದ ಬಳಕೆಗೆ ಹೇಳಿಮಾಡಿಸಿದಂತಿದೆ. ಇದು 2,539 ಲೀಟರ್‌ಗಳಷ್ಟು ಬೃಹತ್ ಕಾರ್ಗೋ ಸ್ಪೇಸ್ ಹೊಂದಿದೆ. ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 681 ಕಿ.ಮೀ. ರೇಂಜ್ ನೀಡುತ್ತದೆ. ಕೇವಲ 5.0 ಸೆಕೆಂಡ್‌ಗಳಲ್ಲಿ 0 ದಿಂದ 100 ಕಿ.ಮೀ. ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಒಳಾಂಗಣ ವಿನ್ಯಾಸ ಹೇಗಿದೆ?

ಮೂರು ಸಾಲಿನ, 6 ಆಸನಗಳ ವಿನ್ಯಾಸ. ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ನೀಡಲಾಗಿದ್ದು, ಪವರ್ಡ್ ಆರ್ಮ್‌ರೆಸ್ಟ್‌ಗಳು, ಒನ್-ಟಚ್ ಫೋಲ್ಡಿಂಗ್, ವೆಂಟಿಲೇಷನ್ ಮತ್ತು ಹೀಟಿಂಗ್ ಸೌಲಭ್ಯಗಳಿವೆ. ಮೂರನೇ ಸಾಲಿನಲ್ಲಿಯೂ ಪವರ್ ರಿಕ್ಲೈನ್ ಮತ್ತು ವೆಂಟೆಡ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆ ಇದೆ.
ಗಾಜಿನಿಂದ ಶಬ್ದ ಒಳಬರದಂತೆ ತಡೆಯುವ ಅಕೌಸ್ಟಿಕ್ ಗ್ಲಾಸ್, ಹೊಸ 19-ಇಂಚಿನ ಮಷಿನಾ ವೀಲ್ಸ್, ಅಪ್‌ಡೇಟೆಡ್ ಅಡಾಪ್ಟಿವ್ ಸಸ್ಪೆನ್ಷನ್ ಮತ್ತು ಎಲೆಕ್ಟ್ರಾನಿಕ್ ಡ್ಯಾಂಪಿಂಗ್ ಶಾಕ್ಸ್ ಸಿಸ್ಟಮ್ ರಸ್ತೆಯ ಏರಿಳಿತಗಳನ್ನು ಹೀರಿಕೊಂಡು ಸುಗಮ ಪ್ರಯಾಣದ ಅನುಭವ ನೀಡುತ್ತವೆ.

ಕಾರಿನಲ್ಲಿದೆ ಅತ್ಯಾಧುನಿಕ ತಂತ್ರಜ್ಞಾನ

ಟೆಸ್ಲಾ ವಾಹನಗಳು ಕನೆಕ್ಟಿವಿಟಿಗೆ ಹೆಸರುವಾಸಿಯಾಗಿವೆ. ಈ ಕಾರು 18-ಸ್ಪೀಕರ್ ಮತ್ತು 1-ಸಬ್‌ವೂಫರ್ ಒಳಗೊಂಡ ಇಮ್ಮರ್ಸಿವ್ ಆಡಿಯೋ ಸಿಸ್ಟಮ್ ಹೊಂದಿದೆ. ಲೈವ್ ಟ್ರಾಫಿಕ್ ವೀಕ್ಷಣೆ, ಸ್ಯಾಟಲೈಟ್ ಮ್ಯಾಪ್, ಲೈವ್ ಕ್ಯಾಮೆರಾ ವ್ಯೂ ಮತ್ತು ಕಾರಿನೊಳಗೇ ಸ್ಪಾಟಿಫೈ, ಆಪಲ್ ಮ್ಯೂಸಿಕ್, ಯೂಟ್ಯೂಬ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಸೇವೆಗಳನ್ನು (ಚಂದಾದಾರಿಕೆ ಆಧಾರಿತ) ಬಳಸಬಹುದಾಗಿದೆ.

ಬೆಲೆ ಎಷ್ಟು?

  • ಈ ಕಾರಿನ ಆರಂಭಿಕ ಬೆಲೆ 61,99,000 ರೂ. ಆಗಿದ್ದು, ಮಾಸಿಕ ಕಂತುಗಳು ಅಂದರೆ ಇಎಂಐ 49,000 ರೂ.ನಿಂದ ಶುರುವಾಗಲಿವೆ.

ಕಾರಿನ ವಿವಿಧ ವೇರಿಯೆಂಟ್‌ಗಳು ಮತ್ತು ಅವುಗಳ ಬೆಲೆ ಹೀಗಿದೆ

  • ಪ್ರೀಮಿಯಂ ರಿಯರ್ ವೀಲ್ ಡ್ರೈವ್ (ಆರ್‌ಡಬ್ಯೂಡಿ): 500 ಕಿ.ಮೀ ರೇಂಜ್, ಟಾಪ್ ಸ್ಪೀಡ್ 201 km/h, ಪಿಕಪ್ 5.9 ಸೆಕೆಂಡ್. ಬೆಲೆ: 59,89,000 ರೂ.
  • ಪ್ರೀಮಿಯಂ ಲಾಂಗ್ ರೇಂಜ್ (ಆರ್‌ಡಬ್ಯೂಡಿ): 661 ಕಿ.ಮೀ ರೇಂಜ್, ಟಾಪ್ ಸ್ಪೀಡ್ 201 km/h, ಪಿಕಪ್ 5.6 ಸೆಕೆಂಡ್. ಬೆಲೆ: 67,89,000 ರೂ.
  • ಎಲ್ ಪ್ರೀಮಿಯಂ ಆಲ್-ವೀಲ್ ಡ್ರೈವ್ (AWD): 681 ಕಿ.ಮೀ ರೇಂಜ್, ಟಾಪ್ ಸ್ಪೀಡ್ 201 km/h, ಪಿಕಪ್ 5.0 ಸೆಕೆಂಡ್. ಬೆಲೆ: 61,99,000 ರೂ.
ಬೆಂಗಳೂರು, ದೆಹಲಿ, ಚಂಡೀಗಢ, ಜೈಪುರ, ಅಹಮದಾಬಾದ್, ಮುಂಬೈ, ಪುಣೆ, ಹೈದರಾಬಾದ್ ಮತ್ತು ಚೆನ್ನೈಗಳನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಇನ್ನೂ 7 ಹೊಸ ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ತೆರೆಯಲು ಸಂಸ್ಥೆ ಯೋಜಿಸಿದೆ. ಟೆಸ್ಲಾದ ಹೋಮ್ ಚಾರ್ಜಿಂಗ್ ಪ್ರೋಗ್ರಾಂ ಸಹ ಎಲ್ಲಾ ರಾಜ್ಯಗಳಲ್ಲಿ ಲಭ್ಯವಿದೆ.

ಬೆಂಗಳೂರಿಗೂ ಬರಲಿದೆ ಸರ್ವಿಸ್‌ ಸೆಂಟರ್‌

ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡಿರುವ ಟೆಸ್ಲಾ ತನ್ನದೇ ಆದ ನೇರ ಸೇವಾ ವ್ಯವಸ್ಥೆಯನ್ನು ಹೊಂದಿದೆ. ಟೆಸ್ಲಾ ವಾಹನಗಳಿಗೆ ಅತಿ ಕಡಿಮೆ ನಿರ್ವಹಣೆ (ಮೆಂಟೆನೆನ್ಸ್) ಅಗತ್ಯವಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ಓವರ್-ದಿ-ಏರ್ (ಒಟಿಎ) ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ರಿಮೋಟ್ ಡಯಾಗ್ನೋಸ್ಟಿಕ್ಸ್ ಮೂಲಕ ಮನೆಯಲ್ಲೇ ಕುಳಿತು ಬಗೆಹರಿಸಿಕೊಳ್ಳಬಹುದು, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net