ಮುಂಬೈ:
ಸುಧೀರ್ಘವಾದ 117 ವರ್ಷಗಳ ಶ್ರೀಮಂತ ಪರಂಪರೆಯನ್ನು ಹೊಂದಿರುವ ಎಸ್‌ವಿಸಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಶಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್)ಬ್ಯಾಂಕ್ ಮೂರನೇ ಅತ್ಯುತ್ತಮ ಬ್ಯಾಂಕ್ ಎಂಬ ಮನ್ನಣೆಯನ್ನು ಪಡೆದಿದೆ.
ಮಹಾರಾಷ್ಟ್ರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳ ಫೆಡರೇಶನ್‌ನ 2023-24 ನೇ ಸಾಲಿಗೆ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, 5,000 ಕೋಟಿ ರೂಗಿಂತ ಹೆಚ್ಚಿನ ಠೇವಣಿ ಹೊಂದಿರುವ ಬ್ಯಾಂಕ್‌ಗಳ ಸಾಲಿನಲ್ಲಿ ಎಸ್‌ವಿಸಿ ಬ್ಯಾಂಕ್ ಪರಿಗಣಿಸಲಾಗಿದೆ.
ಎಸ್‌ವಿಸಿ ಬ್ಯಾಂಕ್ ಪರವಾಗಿ ಸಹಾಯಕ ಜನರಲ್ ಮ್ಯಾನೇಜರ್ ಅಜಯ್ ಸೋನಾರಿಕರ್ ಮತ್ತು ಪ್ರಾದೇಶಿಕ ಮುಖ್ಯಸ್ಥ ಮತ್ತು ಜನರಲ್ ಮ್ಯಾನೇಜರ್ ರಘುಪತಿ ಪರಮೇಶ್ವರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಮತ್ತು ಸಹಕಾರ ಸಚಿವಾಲಯದ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಭಾಗವಹಿಸಿ ಶುಭ ಹಾರೈಸಿದರು.
ಭಾರತೀಯ ರಿಸರ್ವ ಬ್ಯಾಂಕ್ ಕೇಂದ್ರೀಯ ಮಂಡಳಿ ನಿರ್ದೇಶಕರಾದ ಸತೀಶ್ ಕಾಶಿನಾಥ ಮರಾಠೆ, ಸಹಕಾರ ಇಲಾಖೆ ಆಯುಕ್ತ ದೀಪಕ್ ತಾವರೆ, ಮಹಾರಾಷ್ಟ್ರ ಖಿಇಆ ಫೆಡರೇಶನ್ ಅಧ್ಯಕ್ಷ ಅಜಯ್ ಬ್ರಹ್ಮೇಚಾ, ಕಾಸ್ಮಾಸ್ ಬ್ಯಾಂಕ್ ಅಧ್ಯಕ್ಷ ಮತ್ತು ಘೆಅಊಇಖಿಆ ಅಧ್ಯಕ್ಷರಾದ ಮಿಲಿಂದ್ ಕಾಳೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್‌ವಿಸಿ ಸಹಕಾರಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಸಿಂಗ್ ಮಾತನಾಡಿ, ಅಗ್ರ ಬ್ಯಾಂಕ್‌ಗಳಲ್ಲಿ ಒಂದಾಗಿ ನಮ್ಮ ಬ್ಯಾಂಕ್ ಕೂಡ ಗುರುತಿಸಿಕೊಂಡಿರುವುದು ಎಸ್‌ವಿಸಿ ಬ್ಯಾಂಕ್‌ನಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆಯ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಠೇವಣಿಗಳನ್ನು ಹೆಚ್ಚಿಸುವುದು, ವಹಿವಾಟು ಹಿಗ್ಗಿಸುವುದು ಸೇರಿದಂತೆ ಇನ್ನೂ ಹಲವು ಸವಾಲುಗಳ ವಿರುದ್ದವಾಗಿ ನಾವು ಸಾಗಬೇಕಾಗಿದೆ. ಈ ಪ್ರಶಸ್ತಿಯು ಬ್ಯಾಂಕಿಂಗ್ ವಲಯದಲ್ಲಿ ಇನ್ನೂ ಹೆಚ್ಚಿನ ಮಾನದಂಡಗಳನ್ನು ಹೊಂದಿಸಲು ನಮಗೆ ಸ್ಫೂರ್ತಿಯಾಗಿದೆ ಎಂದರು.