ಕುರಿ, ಮೇಕೆ ಸಾಕಣೆಯಲ್ಲಿ ಯಶಸ್ವಿಯಾಗುವುದು ಹೇಗೆ?

goat-and-sheep-farm
Published on
ದುಡಿಮೆಯೇ ದೇವರು, ದುಡಿಯುವ ಇಚ್ಛೆ ಇದ್ದರೆ ಕೆಲಸಕ್ಕೇನು ಬರ ಇಲ್ಲ. ದೃಢಸಂಕಲ್ಪದ ಜತೆಗೆ ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು. ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಂದಿರಿಂದ ಈ ಬೈಗುಳ ಕೇಳಿರಬಹುದು. ಅದೇನೆಂದರೆ ‘ನೀನು ಏನಕ್ಕೂ ಪ್ರಯೋಜನ ಇಲ್ಲ, ಹೋಗಿ ಕುರಿ ಮೇಯ್ಸು’ ಅಂತ. ಆದರೆ, ಕುರಿ ಸಾಕಾಣಿಕೆ ಎಂತ ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ ಅಂತ ಬಹುಶಃ ಅವರೂ ಊಹಿಸಿರಲಿಕ್ಕಿಲ್ಲ.

ನಮ್ಮ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಅಧಿಕವಾಗಿಯೇ ಇದೆ. ಅದರಲ್ಲೂ ಕುರಿ ಮತ್ತು ಮೇಕೆ ಮಾಂಸಪ್ರಿಯರ ಸಂಖ್ಯೆ ಜಾಸ್ತಿಯೇ ಇರುವ ಕಾರಣ ಕುರಿ ಹಾಗೂ ಮೇಕೆಗೆ ಬಹಳ ಬೇಡಿಕೆ ಇದ್ದು, ಬೆಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಾಂಸದ ಕಾರಣದಿಂದ ಮಾತ್ರವಲ್ಲದೆ, ಕುರಿಯ ಚರ್ಮ ಮತ್ತು ಉಣ್ಣೆಯಿಂದ ಸ್ವೆಟರ್, ವಿವಿಧ ಬಗೆಯ ಉಡುಗೆ ತಯಾರಾಗುವ ಕಾರಣ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯಮ ಉತ್ತಮ ರೀತಿಯಲ್ಲಿ ಯಶಸ್ಸು ಕಾಣುತ್ತಿದೆ. ಬಹಳಷ್ಟು ಜನ ಸಣ್ಣಪ್ರಮಾಣದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಆರಂಭ ಮಾಡಿ ಈಗ ದೊಡ್ಡ ಮಟ್ಟದಲ್ಲಿ ಲಾಭಾಂಶ ಗಳಿಸುತ್ತಿದ್ದಾರೆ. ಹಾಗಾದರೆ, ನಾನು ಕೂಡ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಹಣ ಗಳಿಸಲು ಸಾಧ್ಯವೇ? ಅಂತ ನೀವು ಕೇಳಿದರೆ, ಹೌದು ಖಂಡಿತ ಸಾಧ್ಯ. ಹೇಗೆ ಎಂಬುದಕ್ಕೆ ಉತ್ತರ ಈ ಅಂಕಣದಲ್ಲಿದೆ.

ಕುರಿ- ಮೇಕೆ ಸಾಕಾಣಿಕೆ ಕೋರ್ಸ್​ನಲ್ಲಿ ಏನಿದೆ? ಮಾರ್ಗದರ್ಶಕರ ಪರಿಚಯ ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್ ಯಾಕೆ? ಬಂಡವಾಳ, ಸಂಪನ್ಮೂಲ, ಮಾಲೀಕತ್ವ ಮತ್ತು ನೋಂದಣಿ ನಿಯಂತ್ರಣ, ಕಾನೂನು ಮತ್ತು ಅನುಸರಣೆ  ಬಿಜಿನೆಸ್ ಆರಂಭಿಸುವ ಮುನ್ನ ತಯಾರಿ ಹೇಗೆ? ಕುರಿ, ಮೇಕೆಯ ವಿವಿಧ ತಳಿಗಳ ಖರೀದಿ ಹೇಗೆ? ಕುರಿ, ಮೇಕೆ ವಿಧಗಳು ಕುರಿ , ಮೇಕೆ ಸಾಕಾಣಿಕೆಯಲ್ಲಿ ಸೀಸನಾಲಿಟಿ ಕುರಿ ಸಾಕಾಣಿಕೆಗೆ ಬೇಕಾಗುವ ಮಾನವ ಸಂಪನ್ಮೂಲ ಕುರಿ, ಮೇಕೆ ಸಾಕಾಣಿಕೆಗೆ ಅಗತ್ಯ ಮೂಲಸೌಕರ್ಯ ಕುರಿ, ಮೇಕೆ ಸಾಕಾಣಿಕೆಯಿಂದ ಬೇರೆ ಬೇರೆ ಉತ್ಪನ್ನಗಳ ತಯಾರಿಕೆ ಕುರಿ, ಮೇಕೆ ಮಾರುಕಟ್ಟೆ ಮತ್ತು ಹಂಚಿಕೆ ಕುರಿ, ಮೇಕೆ ಸಾಕಾಣಿಕೆಯಲ್ಲಿ ಸಿಗುವ ಲಾಭ ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಕುರಿ ಮತ್ತು ಮೇಕೆ ಸಾಕಾಣಿಕೆ ಎಂದರೇನು?

  • ಪಶುಸಂಗೋಪನೆ ಅಡಿಯಲ್ಲಿ ಬರುವಂತಹ ಕುರಿ ಮತ್ತು ಮೇಕೆ ಸಾಕಾಣಿಕೆ ಅಲ್ಪ-ಸ್ವಲ್ಪ ಭೂಮಿ ಹೊಂದಿರುವವರು ಮತ್ತು ಭೂರಹಿತ ರೈತರು ಮತ್ತು ಉದ್ಯಮಿಗಳಾಗ ಬಯಸುವವರಿಗೆ ಹೆಚ್ಚುವರಿ ಆದಾಯ ಗಳಿಸಲು ಉತ್ತಮ ವ್ಯವಹಾರವಾಗಿದೆ. ಈ ಹಿಂದೆ ಒಂದು ಜನಾಂಗಕ್ಕೆ ಮಾತ್ರ ಮೀಸಲಿದ್ದ ಕುರಿ ಮತ್ತು ಮೇಕೆ ಸಾಕಾಣಿಕೆ ಈಗ ಸರ್ವೆ ಸಾಮಾನ್ಯ ವೃತ್ತಿ/ಪ್ರವೃತ್ತಿಯಾಗಿದೆ. ಅದೆಷ್ಟೋ ಜನ ಈ ವೃತ್ತಿಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
  • ಕುರಿ- ಮೇಕೆ ಸಾಕಾಣಿಕೆಯಿಂದ ದೇಶದ ಜಿಡಿಪಿಗೆ ಕೊಡುಗೆ: ನಮ್ಮ ದೇಶದ ಜಿಡಿಪಿಗೆ ವ್ಯವಸಾಯದ ಕೊಡುಗೆ ಶೇ.18. ಆದರೆ ಈ ಶೇಕಡಾವಾರು 18ರಲ್ಲಿ ಸರಿ ಸುಮಾರು ಶೇ.33 ಅಂದರೆ ಒಟ್ಟು ಜಿಡಿಪಿಯಲ್ಲಿ ಶೇ.6 ಕುರಿ, ಮೇಕೆ ಮತ್ತು ಹಸು ಸಾಕಣೆಯ ಕೊಡುಗೆ ಆಗಿದೆ.
  • ಕುರಿ ಮತ್ತು ಮೇಕೆ ತಳಿಗಳು: ನಮ್ಮ ದೇಶದಲ್ಲಿ ಒಟ್ಟಾರೆ 44 ತಳಿಯ ಅಥವಾ ಜಾತಿಯ ಕುರಿ ಮತ್ತು 34 ಜಾತಿಯ ಮೇಕೆಗಳಿವೆ. ಕುರಿ ತಳಿಗಳು ಅವುಗಳ ಉತ್ಪಾದನೆಗೆ ಅನುಗುಣವಾಗಿ ಮೂರು ವಿಧಗಳಾಗಿ ವಿಂಗಡಣೆಯಾಗಿವೆ, ಅವುಗಳೆಂದರೆ: 1. ಮಾಂಸ ಉತ್ಪಾದಕ ಕುರಿ ತಳಿಗಳು: ಡಾರ್ಸೆಟ್, ಸಫೊಲ್ಕ್, ಚೆವಿಯಟ್ ಮತ್ತಿತರ ತಳಿಗಳು 2. ಉಣ್ಣೆ ಉತ್ಪಾದಕ ಕುರಿ ತಳಿಗಳು: ಮೆರಿನೊ, ರಾಂಬೌಲೆಟ್ ಮತ್ತಿತರ ತಳಿಗಳು 3. ಉಣ್ಣೆ ಮತ್ತು ಮಾಂಸ ಉತ್ಪಾದಕ ಕುರಿ ತಳಿಗಳು: ಮೊಂಟಾಡೇಲ್, ಕೂಕಾ ಇತ್ಯಾದಿ ಉಣ್ಣೆ ಮತ್ತು ಮಾಂಸ ಉತ್ಪಾದನೆಗೆ ಪ್ರಸಿದ್ಧವಾಗಿವೆ.
  • ಸರ್ಕಾರದಿಂದ ಸಿಗುವ ಸವಲತ್ತು: ದನ, ಕುರಿ, ಮೇಕೆ, ಘಟಕಗಳನ್ನು ಸ್ಥಾಪಿಸಲು ವಾಣಿಜ್ಯ ಬ್ಯಾಂಕ್​ಗಳಿಂದ ಗರಿಷ್ಠ 1.20 ಲಕ್ಷ ರೂ. ಸಾಲ ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.50 ಮತ್ತು ಇತರ ಸಣ್ಣ ಮತ್ತು ಅಲ್ಪ ರೈತರಿಗೆ ಶೇ.25 ಸಹಾಯಧನ ನೀಡಲಾಗುತ್ತದೆ. ಮೇವು ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ಒದಗಿಸಲು ಬೆಳೆ ಸಾಲದ ಪ್ರಕಾರ, ಸಹಕಾರಿ ಬ್ಯಾಂಕುಗಳ ಮೂಲಕ 0% ಬಡ್ಡಿಗೆ 50,000 ರೂ. ವರೆಗಿನ ಅಲ್ಪಾವಧಿ ಸಾಲಗಳನ್ನು ನೀಡಲಾಗುತ್ತದೆ. 5 ಜಾನುವಾರುಗಳವರೆಗೆ ವಿಮಾ ಕಂತುಗಳನ್ನು ಪಾವತಿಸಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಸಹಾಯಧನ ನೀಡಲಾಗುತ್ತದೆ.

ಮಾರ್ಗದರ್ಶಕರು ಕಿಶೋರ್ - ಚಿಕ್ಕಬಳ್ಳಾಪುರ ಲಕ್ಷ್ಮೀ ನಾರಾಯಣ - ಭದ್ರಾವತಿ ರಿತೀಶ್- ಶಿವಮೊಗ್ಗ ದೊಡ್ಡರಾಜು- ತುಮಕೂರು ಲಕ್ಷ್ಮೇ ಗೌಡ - ದೊಡ್ಡಬಳ್ಳಾಪುರ ಕಾಂತರಾಜ್ - ಚಿಕ್ಕಬಳ್ಳಾಪುರ

  • ಪಶು ಸುರಕ್ಷಾ ಭೀಮ ಯೋಜನಾ: ಈ ಯೋಜನೆಯಲ್ಲಿ ವಿಮಾ ಪ್ರೀಮಿಯಂಗೆ 50 ಪ್ರತಿಶತದವರೆಗೆ ಸಬ್ಸಿಡಿ ನೀಡಲಾಗುತ್ತದೆ.

ಕುರಿ -ಮೇಕೆ ಸಾಕಾಣಿಕೆ ಕೋರ್ಸ್: ಕುರಿ ಕೊಬ್ಬಿದಷ್ಟು ಲಾಭ ಎಂಬ ಮಾತಿನಂತೆ, ಬಲಿಷ್ಠವಾದ ಕುರಿ ಮತ್ತು ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ತಮ್ಮದೇ ಆದ ಸ್ವಂತ ಉದ್ಯೋಗ ಮಾಡಬೇಕೆಂದಿರುವ ಜನರಿಗೆ ಉತ್ತಮ ಆಯ್ಕೆ ಈ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯೋಗ. ಯಾವುದೇ ಸ್ವಂತ ಭೂಮಿ ಇಲ್ಲದೆಯೂ, ಹೆಚ್ಚು ಬಂಡವಾಳವಿಲ್ಲದೇ, ಗೋಜು- ಗದ್ದಲಗಳಿಲ್ಲದೆ ಆರಂಭಿಸುವ ಉದ್ದಿಮೆಗಳಲ್ಲಿ, ಕುರಿ ಮತ್ತು ಮೇಕೆ ಸಾಕಾಣಿಕೆಯೂ ಒಂದು. ಆದರೆ ಇದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳಾವುವು? ಬೇಕಾಗುವ, ನಿಖರ ಬಂಡವಾಳ ಮತ್ತು ಸಂಪನ್ಮೂಲವಾ ದರೂ ಏನು? ಈ ಉದ್ದಿಮೆ ಆರಂಭಿಸಲು ನಾನು ನೋಂದಣಿ ಏನಾದರೂ ಮಾಡಿಸಬೇಕಾ? ಅದಕ್ಕೆ ಬೇಕಾಗುವ ತಯಾರಿ ಏನು? ಈ ರೀತಿಯ ಹಲವಾರು ಪ್ರಶ್ನೆ ನಿಮ್ಮನ್ನೂ ಕಾಡುತ್ತಾ ಇವೆಯಾ? ಹಾಗಾದ್ರೆ ನೀವು ಇಂಡಿಯನ್ ಮನಿ. ಕಾಮ್ ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ವಿನ್ಯಾಸಗೊಳಿಸಲಾಗಿರುವ ಕುರಿ ಮತ್ತು ಮೇಕೆ ಸಾಕಾಣಿಕೆಯ ಕೋರ್ಸ್ ವೀಕ್ಷಿಸಲೇ ಬೇಕು. ಈ ಕೋರ್ಸ್​ನಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಯಶಸ್ಸು ಕಂಡಿರುವವರು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ನೀವು ಸ್ವಂತ ಉದ್ಯೋಗ ಹೊಂದಲು ಇದು ಉತ್ತಮ ಅವಕಾಶ. ತಡ ಮಾಡದೇ ಆದಷ್ಟು ಬೇಗ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಯಶಸ್ವಿಯಾಗುವುದು ಹೇಗೆ? ಎಂಬ ಕೋರ್ಸ್ ನೋಡಲಾರಂಭಿಸಿ ಮತ್ತು ಸ್ವಯಂ ಉದ್ಯೋಗಿಯಾಗಿ ನಿಮ್ಮ ಶ್ರೀಮಂತಿಕೆ ಪಯಣ ಆರಂಭಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net