ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕದ ರಂಭಿಕ ವಹಿವಾಟಿನಲ್ಲಿ ಒಟ್ಟು 29 ಷೇರುಗಳು ಲಾಭ ಗಳಿಸಿವೆ ಮತ್ತು ಕೇವಲ 1 ಷೇರು ಮಾತ್ರ ನಷ್ಟ ಅನುಭವಿಸಿದೆ. ಅದೇ ರೀತಿ ನಿಫ್ಟಿ 50 ಸೂಚ್ಯಂಕದಲ್ಲಿ ಸುಮಾರು 43 ಷೇರುಗಳು ಲಾಭ ಕಂಡರೆ, 7 ಷೇರುಗಳು ನಷ್ಟ ಅನುಭವಿಸಿವೆ. ಪ್ರಮುಖವಾಗಿ ಐಟಿ ಮತ್ತು ಮೆಟಲ್ ವಲಯದ ಷೇರುಗಳು ಲಾಭದ ಹಾದಿಯಲ್ಲಿದ್ದು, ವಿಪ್ರೋ, ಹಿಂದೂಸ್ತಾನ್ ಕಾಪರ್, ಎಚ್‌ಸಿಎಲ್ ಟೆಕ್, ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳು ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿ ಮುಂಚೂಣಿಯಲ್ಲಿವೆ. ಮತ್ತೊಂದೆಡೆ, ಮಾರುಕಟ್ಟೆಯ ಈ ಏರಿಕೆಯ ನಡುವೆಯೂ ಕೆಲವು ಫಾರ್ಮಾ ಮತ್ತು ಎನರ್ಜಿ ಷೇರುಗಳು ಒತ್ತಡಕ್ಕೆ ಸಿಲುಕಿದ್ದು, ಡಾ. ರೆಡ್ಡೀಸ್, ಅದಾನಿ ಎಂಟರ್‌ಪ್ರೈಸಸ್, ಅಪೋಲೋ ಹಾಸ್ಪಿಟಲ್ಸ್, ಇಂಡಿಗೋ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಗಳು ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.