ಮೇಲೆ ಹೇಳಿದಂತೆಯೇ ಬಿಸಿನೆಸ್ ಸೈಕಲ್ ಇನ್ವೆಸ್ಟಿಂಗ್ ವಿಧಾನ ಕಾರ್ಯನಿರ್ವಹಿಸುತ್ತದೆ. ಈ ವಿಧಾನವು ಪ್ರತಿ ಹಂತದಲ್ಲಿ ಯಾವ ಸೆಕ್ಟರ್‌ಗಳು ಉತ್ತಮ ಪ್ರದರ್ಶನ ತೋರುತ್ತವೆಯೋ ಅವುಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ವಿಧಾನವಾಗಿದೆ. ಅಂದರೆ, ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ, ಹೂಡಿಕೆದಾರರ ಅಪಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆದಾಯವನ್ನು ಹೆಚ್ಚಿಸುವ ಗುರಿಯನ್ನು ಈ ವಿಧಾನ ಹೊಂದಿದೆ. ನಮ್ಮ ಸುತ್ತಮುತ್ತಲಿನ ಆರ್ಥಿಕ ವಿಷಯಗಳು ಉತ್ತಮ ಸ್ಥಿತಿಯಲ್ಲಿ ಅಥವಾ ಬೆಳೆಯುತ್ತಿದ್ದರೆ, ಜನರು ಮತ್ತು ಉದ್ಯಮಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಖಾನೆಗಳು ಹೆಚ್ಚು ಶ್ರಮಿಸುತ್ತವೆ, ಜನರು ಚಟುವಟಿಕೆಗಳು ಹೆಚ್ಚಾಗುತ್ತದೆ ಮತ್ತು ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಮತ್ತು ಕಂಪನಿಗಳ ಹೂಡಿಕೆ ಹೆಚ್ಚಾಗುತ್ತದೆ. ಅದೇ ರೀತಿ, ನಮ್ಮ ಸುತ್ತಮುತ್ತಲಿನ ವ್ಯವಹಾರಗಳು ನಿಧಾನ ಅಥವಾ ಕುಗ್ಗಿದಾಗ, ಜನರು ಜಾಗರೂಕರಾಗುತ್ತಾರೆ ಮತ್ತು ಅನಗತ್ಯ ಖರ್ಚು ಮಾಡುವುದನ್ನು ತಡೆಹಿಡಿಯುತ್ತಾರೆ. ಅಲ್ಲದೆ, ತಮ್ಮ ವೆಚ್ಚಗಳನ್ನು ಕಡಿತಗೊಳಿಸುತ್ತಾರೆ. ಇದರಿಂದ ಆರ್ಥಿಕತೆಯು ನಿಧಾನಗೊಳ್ಳುತ್ತದೆ. ಹೀಗಾಗಿ, ಎಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ, ಕಾರ್ಖಾನೆಗಳು ಎಷ್ಟೊಂದು ಬಿಜಿಯಾಗಿವೆ ಮತ್ತು ಜನರು ಏನನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಅಂಶಗಳ ಮೇಲೆ ಮಾರುಕಟ್ಟೆ ಬೆಳವಣಿಗೆ ಅವಲಂಬಿಸಿರುತ್ತದೆ ಅನ್ನೋದನ್ನು ನೀವು ನೋಡಬಹುದು.