ಮ್ಯೂಚುವಲ್ ಫಂಡ್‌ನಲ್ಲಿ ಷೇರುಗಳ ಆಯ್ಕೆ ಮತ್ತು ನಿರ್ವಹಣೆಯನ್ನು ಫಂಡ್ ಮ್ಯಾನೇಜರ್ ನೋಡಿಕೊಂಡರೂ, ಲಾರ್ಜ್, ಮಿಡ್ ಅಥವಾ ಸ್ಮಾಲ್ ಕ್ಯಾಪ್, ಲಾರ್ಜ್ ಅಂಡ್ ಮಿಡ್ ಕ್ಯಾಪ್, ಮಲ್ಟಿ ಕ್ಯಾಪ್ ಹಾಗೂ ಫ್ಲೆಕ್ಸಿ ಕ್ಯಾಪ್ ಮುಂತಾದವುಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕೆಂಬ ನಿರ್ಧಾರ ಅಂತಿಮವಾಗಿ ಹೂಡಿಕೆದಾರರದೇ ಆಗಿರುತ್ತದೆ. ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಈ ಪ್ರತಿಯೊಂದು ವಿಭಾಗಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುವುದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆ ಮಾಡುವುದು ಸಾಮಾನ್ಯರಿಗೆ ಕಷ್ಟವಾಗಬಹುದು. ಇಂತಹ ಸಂದರ್ಭಗಳಲ್ಲಿ, ವಿವಿಧ ಮಾರುಕಟ್ಟೆ ವಿಭಾಗಗಳಲ್ಲಿ ಹೂಡಿಕೆ ಮಾಡುವ 'ಫಂಡ್ ಆಫ್ ಫಂಡ್ಸ್' (Fund of Funds) ಒಂದು ಉತ್ತಮ ಆಯ್ಕೆಯಾಗಬಲ್ಲದು, ಏಕೆಂದರೆ, ಇದು ಸಂಶೋಧನೆ ಆಧಾರಿತ ನಿರ್ಧಾರಗಳ ಮೂಲಕ ಹೂಡಿಕೆದಾರರ ಪರವಾಗಿ ವಿವಿಧ ಈಕ್ವಿಟಿ ಫಂಡ್‌ಗಳಲ್ಲಿ ಹಣವನ್ನು ತೊಡಗಿಸಿ ಹೂಡಿಕೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.