ಬಜೆಟ್ ಪೂರ್ವಸ್ಥಿತಿಗೆ ಮರಳಿತು ಸೆನ್ಸೆಕ್ಸ್​- ದಿನದ ವಹಿವಾಟಿನಲ್ಲಿ 917 ಅಂಶ ಏರಿಕೆ, ನಿಫ್ಟಿ 271.75 ಅಂಶ ಏರಿಕೆ

NSE BSE 20 DEC 19
Published on

ಮುಂಬೈ: ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ನ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿ ಬಜೆಟ್ ಪೂರ್ವದ ಸ್ಥಿತಿಗೆ ಮರಳಿದೆ.ಜಾಗತಿಕ ಮಾರುಕಟ್ಟೆಯ ಸ್ಥಿರತೆಯನ್ನು ಗಮನಿಸಿದ ಹೂಡಿಕೆದಾರರು ಖರೀದಿ ಪ್ರಮಾಣ ಹೆಚ್ಚಿಸಿದ ಪರಿಣಾಮ ಈ ಚೇತರಿಕೆ ದಾಖಲಾಗಿದೆ.

ಮಂಗಳವಾರದ ಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 917.07 ಅಂಶ (2.30%) ಏರಿಕೆ ದಾಖಲಿಸಿ 40,789.38ರಲ್ಲಿ ವಹಿವಾಟು ಮುಗಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್​ ಗರಿಷ್ಠ 40,818.94 ಅಂಶದ ತನಕ ಏರಿಕೆ ದಾಖಲಿಸಿತು. ಇದೇ ರೀತಿ ನಿಫ್ಟಿ 271.75 ಅಂಶ(2.32%) ಏರಿಕೆ ದಾಖಲಿಸಿ 11,979.65ರಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಟೈಟಾನ್ ಷೇರುಗಳು 7.97 ಶೇಕಡ ಏರಿಕೆ ಕಂಡರೆ, ಐಟಿಸಿ, ಎಚ್​ಡಿಎಫ್​ಸಿ, ಬಜಾಜ್ ಫೈನಾನ್ಸ್​, ಟಾಟಾ ಸ್ಟೀಲ್ ಷೇರುಗಳು ಕೂಡ ಏರಿಕೆ ದಾಖಲಿಸಿದವು. ಇದೇ ವೇಳೆ, ಬಜಾಜ್​ ಆಟೋ, ಎಚ್​ಯುಎಲ್​ ಷೇರುಗಳು ನಷ್ಟ ಅನುಭವಿಸಿದವು.

ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16 ಪೈಸೆ ಏರಿಕೆ ಕಂಡು 71.22ರಲ್ಲಿ ವಹಿವಾಟು ಮುಗಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net