ಸೆನ್ಸೆಕ್ಸ್ 137 ಅಂಶ ಚೇತರಿಕೆ ತೋರಿದರೆ ನಿಫ್ಟಿ 11,700ಕ್ಕೆ ಏರಿಕೆ

Sensex 17 Dec 19
Published on

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಸೋಮವಾರದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 137 ಅಂಶ ಚೇತರಿಕೆ ತೋರಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಮತ್ತೆ 11,700ಕ್ಕೆ ಏರಿದೆ.

ಎಚ್​ಯುಎಲ್​, ಐಸಿಐಸಿಐ ಬ್ಯಾಂಕ್​, ಏಷ್ಯನ್ ಪೇಂಟ್ಸ್​ ಷೇರುಗಳ ಕಾರಣ ಪೇಟೆಯಲ್ಲಿ ಏರಿಕೆ ದಾಖಲಾಗಿದೆ.ಕೇಂದ್ರ ಬಜೆಟ್ ಮಂಡನೆ ಬಳಿಕ ಏರಿಳಿತದ ಹಾದಿಯಲ್ಲಿದ್ದ ಷೇರು ಸೂಚ್ಯಂಕಗಳ ಪೈಕಿ ಸೆನ್ಸೆಕ್ಸ್​ 136.78 ಅಂಶ (0.34%) ಏರಿಕೆ ದಾಖಲಿಸಿ 40,014.90 ಅಂಶದಲ್ಲೂ, ನಿಫ್ಟಿ 46.05 ಅಂಶ (0.39%) ಏರಿಕೆಯೊಂದಿಗೆ 11,707.90 ಅಂಶದಲ್ಲೂ ದಿನದ ವಹಿವಾಟು ಮುಗಿಸಿವೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಷೇರುಗಳು ಟಾಪ್ ಗೇನರ್​ ಆಗಿದ್ದು ಶೇಕಡ 6.32 ಏರಿಕೆ ದಾಖಲಿಸಿವೆ. ಇದರ ಬೆನ್ನಿಗೆ, ನೆಸ್ಸ್ಲೆ ಇಂಡಿಯಾ, ಎಚ್​ಯುಎಲ್​, ಬಜಾಜ್ ಆಟೋ, ಇಂಡಸ್​ಇಂಡ್ ಬ್ಯಾಂಕ್​, ಟಾಟಾ ಸ್ಟೀಲ್​, ಮಾರುತಿ, ಪವರ್​ ಗ್ರಿಡ್ ಷೇರುಗಳು ಏರಿಕೆ ದಾಖಲಿಸಿವೆ. ಇನ್ನೊಂದೆಡೆ, ಐಟಿಸಿ ಶೇಕಡ 5.09 ಇಳಿಕೆ ದಾಖಲಿಸಿದರೆ, ಟಿಸಿಎಸ್​, ಎಚ್​ಸಿಎಲ್ ಟೆಕ್​, ಹೀರೋ ಮೋಟೋ ಕಾರ್ಪ್​, ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿವೆ.

ಇದೇ ವೇಳೆ ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಸೋಮವಾರ ಅಮೆರಿಕನ್ ಡಾಲರ್ ಎದುರು 17 ಇಳಿಕೆ ಕಂಡಿದ್ದು 71.49ರ ದರದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net