ಸೆನ್ಸೆಕ್ಸ್ 500 ಅಂಶ ಏರಿಕೆ, ನಿಫ್ಟಿ 11,300ರ ಆಸುಪಾಸಿನಲ್ಲಿ ವಹಿವಾಟು ಮುಂದುವರಿಕೆ

NSE BSE 20 DEC 19
Published on

ಷೇರುಪೇಟೆಯ ಮೇಲೂ ಆಗಿತ್ತಾದರೂ, ಕಳೆದ ಎರಡು ದಿನಗಳಿಂದ ಭಾರತೀಯ ಷೇರುಪೇಟೆಯಲ್ಲಿ ಲಾಭಾಂಶದಲ್ಲಿ ಮುನ್ನಡೆದಿದೆ. ಕೊರೊನಾ ಸೋಂಕಿನ ವಿಚಾರ ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲೂ ಪ್ರಸ್ತಾಪವಾಗಲಿದ್ದು, ಪರಿಣಾಮದ ಬಗ್ಗೆ ಚರ್ಚೆಯಾಗಲಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಮಂಗಳವಾರದ ವಹಿವಾಟು ಶುರುವಾದಾಗ 533.37 ಅಂಶ (1.40%) ಏರಿಕೆ ದಾಖಲಿಸಿ 38,677.39ರಲ್ಲಿ ವಹಿವಾಟು ನಡೆಸಿದೆ. ಇದೇ ವೇಳೆ ನಿಫ್ಟಿ 179.95 ಅಂಶ(1.61%) ಏರಿಕೆ ದಾಖಲಿಸಿದ್ದು, 11,132.75ರಲ್ಲಿ ವಹಿವಾಟು ಮುಂದುವರಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿರುವ ಎಲ್ಲ ಮೂವತ್ತು ಷೇರುಗಳು ದಿನದ ವಹಿವಾಟಿನ ಆರಂಭ ಪಾಸೆಟಿವ್ ನೋಟ್​ನೊಂದಿಗೇ ಮಾಡಿದ್ದು, ಸನ್​ ಫಾರ್ಮಾ, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಶ್​, ಹೀರೋ ಮೋಟೋಕಾರ್ಪ್​, ಐಸಿಐಸಿಐ ಬ್ಯಾಂಕ್​, ಎಚ್​ಸಿಎಲ್​ ಟೆಕ್​ ಷೇರುಗಳು ಟಾಪ್ ಗೇನರ್ಸ್ ಆಗಿ ಮೂಡಿವೆ.
ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 153.27 ಅಂಶ ಇಳಿಕೆಯಾಗಿದ್ದು 38,144.02ರಲ್ಲೂ, ನಿಫ್ಟಿ 69 ಅಂಶ ಕುಸಿದು 11,132.75ರಲ್ಲಿ ವಹಿವಾಟು ಮುಗಿಸಿದ್ದವು. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net