ಕೊರೊನಾಕ್ಕೆ ಷೇರುಪೇಟೆ ಕುಸಿತ

Share market vvani
Published on

ಮುಂಬೈ: ಕರೊನಾ ವೈರಸ್ ಸೋಂಕು ಚೀನಾದ ಹೊರಗಡೆಯೂ ತೀವ್ರವಾಗಿ ಹರಡುತ್ತಿರುವುದರಿಂದ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗುತ್ತಿದ್ದು ಸೋಮವಾರ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ.

ಭಾರತದ ಪ್ರಮುಖ ಷೇರು ಸೂಚ್ಯಂಕ ಸೆನ್ಸೆಕ್ಸ್ 807 ಅಂಕ ಕುಸಿತವಾಯಿತು. ಈ ವರ್ಷ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿದ್ದು ಇದು ಎರಡನೇ ಪ್ರಕರಣ ಕುಸಿತವಾಗಿದೆ. ಸೆನ್ಸೆಕ್ಸ್ ದಿನದಲ್ಲಿ ಅತ್ಯಂತ ಕಡಿಮೆ, ಅಂದರೆ 40,306.36 ಅಂಕಕ್ಕೆ ಕುಸಿತ ಕಂಡಿತು. ಕೊನೆಯಲ್ಲಿ ಅದು 40,363.23 ಅಂಕಕ್ಕೆ ನಿಂತಿತು.

ಒಟ್ಟಾರೆ 806.89 ಅಂಕ ಅಥವಾ ಶೇಕಡಾ 1.96 ಕುಸಿತವಾಗಿ ಈ ವರ್ಷದ ಎರಡನೇ ದೊಡ್ಡ ಇಳಿಮುಖ ಬೆಳವಣಿಗೆ ದಾಖಲಾಯಿತು. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾದ ದಿನ, 987 ಅಂಕದಷ್ಟು ಕುಸಿತ ವಾಗಿತ್ತು. ಎನ್​ಎಸ್​ಇ ನಿಫ್ಟಿ ಸೂಚ್ಯಂಕ 251.45 ಅಂಕ (ಶೇ.2.08) ಕುಸಿತವಾಗಿ 11,829. 40 ಅಂಕಕ್ಕೆ ನಿಂತಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net