ಛಿದ್ರ ಟಿಪ್ಪಣಿಯೊಂದಿಗೆ ಬುಧವಾರ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಮತ್ತು ನಿಫ್ಟಿ

BSE 4 MAR 20
Published on

ಮುಂಬೈ: ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್ಎಸ್​ಇ) ಸೂಚ್ಯಂಕ ನಿಫ್ಟಿಗಳು ಬುಧವಾರ ವಹಿವಾಟನ್ನು ಛಿದ್ರ ಟಿಪ್ಪಣಿಯೊಂದಿಗೆ ಆರಂಭಿಸಿವೆ. ಕೊರೊನಾ ವೈರಸ್ ಸೋಂಕು ಕುರಿತ ಹೂಡಿಕೆದಾರರ ಸೆಂಟಿಮೆಂಟ್​ ಇನ್ನೂ ಇರುವ ಕಾರಣ ಅದರ ಪರಿಣಾಮ ಪೇಟೆಯ ಮೇಲೆ ಇದ್ದೇ ಇದೆ.

ಮೂವತ್ತು ಷೇರುಗಳ ಸೆನ್ಸೆಕ್ಸ್​ ಬುಧವಾರ ಬೆಳಗ್ಗೆ 47.12 ಅಂಶ ಇಳಿಕೆ ತೋರಿ 38,576.58ರಲ್ಲೂ, ನಿಫ್ಟಿ 10.20 ಅಂಶ ಕುಸಿದು 11,293.10 ರಲ್ಲೂ ವಹಿವಾಟು ಆರಂಭಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ಇಂಡ್ ಬ್ಯಾಂಕ್​, ಟಾಟಾ ಸ್ಟೀಲ್​, ಎಚ್​ಡಿಎಫ್​ಸಿ ಬ್ಯಾಂಕ್​, ಎಸ್​ಬಿಐ, ಐಸಿಐಸಿಐ ಬ್ಯಾಂಕ್​ ಷೇರುಗಳು ನಷ್ಟ ಅನುಭವಿಸಿವೆ. ಬಜಾಜ್ ಆಟೋ, ಏಷ್ಯನ್ ಪೇಂಟ್ಸ್​, ಭಾರ್ತಿ ಏರ್​ಟೆಲ್​, ಎಚ್​ಸಿಎಲ್ ಟೆಕ್​ ಷೇರುಗಳು ಲಾಭಗಳಿಸಿವೆ.

ಮಂಗಳವಾರದ ವಹಿವಾಟಿಗೆ ಸಂಬಂಧಿಸಿ ಪೇಟೆಯಲ್ಲಿ ಲಭ್ಯ ತಾತ್ಕಾಲಿಕ ದತ್ತಾಂಶ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,415.80 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ. ಇದೇ ವೇಳೆ ದೇಶಿ ಸಾಂಸ್ಥಿಕ ಹೂಡಿಕೆದಾರರು 3.135. 24 ಕೋಟಿ ರೂಪಾಯಿ ಮೌಲ್ಯದ ಷೇರು ಖರೀದಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net