ಕರೊನಾ ಸೋಂಕಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಪತನ ಕಂಡ ಸೆನ್ಸೆಕ್ಸ್: ಹೂಡಿಕೆದಾರರಲ್ಲಿ ಮುಗಿಲುಮುಟ್ಟಿದೆ ಆತಂಕ

Stock Market Crash 23 MAR 20
Published on

ಮುಂಬೈ: ಕರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವಂತೆ ಭಾರತೀಯ ಷೇರುಪೇಟೆ ತಲ್ಲಣಕ್ಕೆ ಒಳಗಾಗಿದೆ. ಸೋಮವಾರದ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟದ ಅಂದರೆ 3,900ಕ್ಕೂ ಹೆಚ್ಚು ಅಂಶದ ಕುಸಿತ ಅನುಭವಿಸಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ ಸೂಚ್ಯಂಕ ನಿಫ್ಟಿ ಕೂಡ 7, 650ರ ಕೆಳಕ್ಕೆ ಜಾರಿದೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇಕಡ 13.15 ಅಂಶ ಅರ್ಥಾತ್ 3,935 ಅಂಶ ಕುಸಿದು 25,981ರಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ ವೇಳೆ, ನಿಫ್ಟಿ ಶೇಕಡ 12.98 ಅಂದರೆ 1,135.20 ಅಂಶ ಕುಸಿದು 7.610.25 ಅಂಶದಲ್ಲಿ ವಹಿವಾಟು ಮುಗಿಸಿದೆ.

ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ ಮತ್ತು ನಿಫ್ಟಿಗಳು ಶೇಕಡ 10 ಕುಸಿತ ಕಂಡಿದ್ದವು. ಕೂಡಲೇ 45 ನಿಮಿಷ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಹನ್ನೊಂದು ಗಂಟೆ ಸುಮಾರಿಗೆ ಮತ್ತೆ ವಹಿವಾಟು ಶುರುವಾಯಿತಾದರೂ, ಹೂಡಿಕೆದಾರರ ನಷ್ಟ ತಡೆಯಲಾಗಲಿಲ್ಲ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಏಕ್ಸಿಸ್ ಬ್ಯಾಂಕ್​ ಹೆಚ್ಚು ಅಂದರೆ ಶೇಕಡ 28 ನಷ್ಟವಾಗಿದ್ದು, ಬಜಾಜ್ ಫೈನಾನ್ಸ್​, ಇಂಡಸ್​ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್​, ಮಾರುತಿ, ಎಲ್​ಆ್ಯಂಡ್ ಟಿ ಕಂಪನಿ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net