ಸೆನ್ಸೆಕ್ಸ್ 82 ಅಂಶ ಇಳಿಕೆ, ನಿಫ್ಟಿ 11,800ಕ್ಕಿಂತ ಕೆಳಮಟ್ಟಕ್ಕೆ

STOCK Market 1 25 FEB 20
Published on

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟು ಭಾರಿ ವೊಲಟೈಲ್ ಆಗಿ ಶುರುವಾಗಿದ್ದು, ಸತತ ಮೂರನೇ ದಿನವೂ ಹೂಡಿಕೆದಾರರು ನಷ್ಟವನ್ನೇ ಅನುಭವಿಸಿದ್ದಾರೆ. ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ಕೊರೊನಾ ವೈರಸ್​ ಸೋಂಕಿನ ಆತಂಕ ಆವರಿಸಿದ್ದರ ಪರಿಣಾಮ ಇದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್​ ಮಾರಿಷಸ್​ ಅನ್ನು ಬೂದು ಪಟ್ಟಿ ಸೇರಿಸಲಿದೆ ಎಂಬ ಸುದ್ದಿಯ ಬಗ್ಗೆ ಕಳಕಳಿ ಪೇಟೆಯಲ್ಲಿ ಕಳಕಳಿ ವ್ಯಕ್ತವಾಗಿದ್ದು, ಹೆಚ್ಚಿನ ಕುಸಿತ ಕಂಡು ಕೊನೆಗೆ ಅಲ್ಲೇ ಚೇತರಿಕೆ ಕಾಣುವ ಪ್ರಯತ್ನ ಪೇಟೆಯಲ್ಲಿ ಮಂಗಳವಾರ ಬೆಳಗೆ ಕಂಡುಬಂದಿತ್ತು. ಈ ಚೇತರಿಕೆಗೆ ಸೆಬಿಯ ಹೇಳಿಕೆ ಕಾರಣ. ಮಾರಿಷಸ್​ನಲ್ಲಿರುವ ವಿದೇಶಿ ಹೂಡಿಕೆದಾರರು ಎಫ್​ಪಿಐ ನೋಂದಣಿ ಹೊಂದಿದ್ದರೆ ತಮ್ಮ ವಹಿವಾಟು ಮುಂದುವರಿಸಬಹುದು ಎಂದು ಸೆಬಿ ಹೇಳಿತ್ತು.

ತೀವ್ರತರವಾದ ಹೊಯ್ದಾಟದಲ್ಲಿದ್ದ ಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ದಿನದ ವಹಿವಾಟಿನ ವೇಳೆ 300 ಅಂಶಕ್ಕೂ ಹೆಚ್ಚು ಇಳಿದಿತ್ತು. ಬಳಿಕ ದಿನದ ಅಂತ್ಯಕ್ಕೆ 82.03 ಅಂಶ ಇಳಿಕೆಯಾಗಿ 40,281.20ಯಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ 31.50 ಅಂಶ ಇಳಿದು 11,797.90 ಯಲ್ಲಿ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಸನ್ ಫಾರ್ಮಾ ಟಾಪ್ ಲೂಸರ್ ಆಗಿದ್ದು, ಷೇರು ಮೌಲ್ಯ ಶೇಕಡ 2.37 ಕುಸಿದು ನಷ್ಟ ಅನುಭವಿಸಿದೆ.ಎಚ್​ಸಿಎಲ್ ಟೆಕ್​, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್​ಇಂಡ್ ಬ್ಯಾಂಕ್​, ಎಲ್​ಆ್ಯಂಡ್​ಟಿ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇದೇ ವೆಳೇ, ಟಿಸಿಎಸ್​ ಶೇಕಡ 1.98 ಅಂಶ ಲಾಭ ಗಳಿಸಿದ್ದು, ಟಾಟಾ ಸ್ಟೀಲ್​, ಭಾರ್ತಿ ಏರ್​​ಟೆಲ್​, ಎಸ್​ಬಿಐ, ಎಚ್​ಯುಎಲ್​ ಮುಂತಾದ ಷೇರುಗಳು ಲಾಭಗಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net