

ಮುಂಬೈ: ತೈಲ ಬೆಲೆ ಕುಸಿತ , ಕರೊನಾದ ಆತಂಕದಿಂದ ಸೋಮವಾರ ಮುಂಬೈ ಷೇರುಪೇಟೆಯಲ್ಲಿ ರಕ್ತಪಾತ ಉಂಟಾಗಿತ್ತು. ಆದರೆ ಇಂದು ಬಿಎಸ್ಇ ಸೆನ್ಸೆಕ್ಸ್ 62 ಪಾಯಿಂಟ್ಸ್ ಏರಿಕೆಯಲ್ಲಿ ಅಂತ್ಯಗೊಂಡು ಚೇತರಿಕೆ ಕಂಡಿದೆ. ಸೋಮವಾರ ಭಾರೀ ನಷ್ಟ ಅನುಭವಿಸಿದ್ದ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಿಸ್ಟ್ರೀಸ್ ಲಿಮಿಟೆಡ್ ಷೇರುಗಳು ಇಂದು 3 ಪರ್ಸೆಂಟ್ನಷ್ಟು ಪುಟಿದೆದ್ದಿದೆ.
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಹೀರೋ ಮೋಟೋಕಾರ್ಪ್, ರಿಲಯನ್ಸ್ ಇಂಡಿಸ್ಟ್ರೀಸ್, ಐಸಿಸಿಐ ಬ್ಯಾಂಕ್ ಮತ್ತು ಎಲ್ & ಟಿ ಹೆಚ್ಚು ಲಾಭಗಳಿಸಿದ ಟಾಪ್ ಕಂಪನಿಗಳಾಗಿವೆ. ಆದರೆ ಟಾಟಾ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್, ಒಎನ್ಜಿಸಿ, ಎಸ್ಬಿಐ ಮತ್ತು ಇನ್ಫೋಸಿಸ್ ಷೇರುಗಳು ಗಮನಾರ್ಹವಾಗಿ ಕುಸಿತಕಂಡಿವೆ.
ಈಕ್ಟಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್ ಬುಧವಾರ 62 ಅಂಕಗಳಷ್ಟು ಏರಿಕೆ ಕಂಡರೂ, ದೇಶದಲ್ಲಿನ ಕರೊನಾ ವೈರಸ್ ಎಫೆಕ್ಟ್ ಷೇರುಪೇಟೆಯಲ್ಲಿ ಇನ್ನೂ ಮುಂದುವರಿದಿದೆ. ದಿನದ ಪ್ರಾರಂಭದಲ್ಲಿ 386 ಪಾಯಿಂಟ್ಸ್ ಚೇತರಿಕೆಯಿಂದ, ಸುಮಾರು 30 ಷೇರ್ ಇಂಡೆಕ್ಸ್ ಏರಿಕೆಯಾಗಿದೆ. ಇದರಿಂದ 62.45 ಅಂಕಗಳ ಚೇತರಿಕೆ ಕಂಡು 35,697.40 ತಲುಪಿತು. ಅದೇ ರೀತಿ ಎನ್ಎಸ್ಇ ನಿಫ್ಟಿ 6.95 ಪಾಯಿಂಟ್ಸ್ಗಳಷ್ಟು ಏರಿ 10,458.40 ವಹಿವಾಟು ಮುಗಿಸಿದೆ.
ಕರೊನಾ ಭೀತಿ ಮತ್ತು ತೈಲ ಬೆಲೆ ಕುಸಿತದ ಮಧ್ಯೆಯೂ ಹೂಡಿಕೆದಾರರಿಗೆ ಈಕ್ವಿಟಿ ಬೆಂಚ್ಮಾರ್ಕ್ ಕೊಂಚ ಚೈತನ್ಯ ನೀಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೋಗಳ ಷೇರುಪೇಟೆ ಭಾರೀ ನಷ್ಟ ಅನುಭವಿಸುತ್ತಿವೆ. ಯುರೋಪ್ನಲ್ಲಿ ಆರಂಭಿಕ ವಹಿವಾಟು ಶೇ. 2ರಷ್ಟು ಇಳಿಕೆ ಕಂಡಿತ್ತು.
ಬ್ರೆಂಟ್ ಕ್ರೂಡ್ ಆಯಿಲ್ 2.02 ನಷ್ಟು ಕುಸಿದಿದ್ದು, ಪ್ರತಿ ಬ್ಯಾರೆಲ್ ಬೆಲೆ 36.47 ಡಾಲರ್ಗೆ ಇಳಿದಿದೆ. ರಷ್ಯಾದೊಂದಿಗೆ ತೈಲ ದರ ಸಮರಕ್ಕಿಳಿದಿರುವ ಸೌದಿ ಅರೇಬಿಯಾ, ದಿನಕ್ಕೆ 1 ಮಿಲಿಯನ್ ಬ್ಯಾರೆಲ್ನಷ್ಟು ತೈಲ ಉತ್ಪಾದನೆಯನ್ನು ಹೆಚ್ಚಿಸಿರುವುದರಿಂದ ದ ತೈಲ ಬೆಲೆ ಪಾತಳದತ್ತ ಮುಖಮಾಡಿದೆ. (ಏಜೆನ್ಸೀಸ್)