

ಮುಂಬೈ: ಜಗತ್ತು ಹೊಸ ಕ್ಯಾಲೆಂಡರ್ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದು,ರಜಾಕಾಲವಾದ್ದರಿಂದ ಷೇರುಪೇಟೆ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಜಾಗತಿಕ ಬೆಳವಣಿಗೆ ಭಾರತೀಯ ಷೇರುಪೇಟೆಯ ಮೇಲೂ ಪರಿಣಾಮ ಬೀರಿದ್ದು, ಮಂಗಳವಾರ ಸೆನ್ಸೆಕ್ಸ್ 100 ಅಂಶಗಳ ಇಳಿಕೆಯೊಂದಿಗೆ ವಹಿವಾಟು ಶುರುಮಾಡಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ)ನ ಸೂಚ್ಯಂಕ ಸೆನ್ಸೆಕ್ಸ್ 108.21 ಅಂಶ ಅಥವಾ ಶೇಕಡ 0.26 ಇಳಿಕೆ ದಾಖಲಿಸಿಕೊಂಡು 41,449.79ರಲ್ಲಿ ವಹಿವಾಟು ಆರಂಭಿಸಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್ಇ)ನ ಸೂಚ್ಯಂಕ ನಿಫ್ಟಿ 50 ಕೂಡ 28.10 ಅಂಶ ಅಥವಾ ಶೇಕಡ 0.23 ಇಳಿಕೆಯೊಂದಿಗೆ 12,227.75ರಲ್ಲಿ ವಹಿವಾಟು ಶುರುಮಾಡಿಕೊಂಡಿದೆ.
ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 17.14 ಅಂಶ ಕುಸಿತ ದಾಖಲಿಸಿಕೊಂಡು 41,558ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇದೇ ರೀತಿ ನಿಫ್ಟಿ 10.05 ಅಂಶ ಏರಿಕೆ ದಾಖಲಿಸಿ 12,255.85ರಲ್ಲಿ ವಹಿವಾಟು ಮುಗಿಸಿತ್ತು.(ಏಜೆನ್ಸೀಸ್)