ಹೂಡಿಕೆದಾರ ಹಿತಾಸಕ್ತಿ ವಿಚಾರ: ಹೂಡಿಕೆ ಸಲಹೆಗಾರರ ನಿಯಮ ಬಿಗಿಗೊಳಿಸಿದ ಸೆಬಿ

Investment-Advisor 17 FEB 20
Published on

ಮುಂಬೈ: ಹೂಡಿಕೆದಾರರ ಹಿತ ಕಾಪಾಡುವ ದೃಷ್ಟಿಯಿಂದ ಹೂಡಿಕೆ ಸಲಹೆಗಾರರ ನಿಯಮವನ್ನು ಸೆಬಿ ಬಿಗಿಗೊಳಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಸೆಬಿ, ಹೂಡಿಕೆ ಸಲಹೆಗಾರರ ಅರ್ಹತೆಯನ್ನು ಬಿಗಿಗೊಳಿಸಿದ್ದು, ಅವರು ಹೂಡಿಕೆದಾರರಿಗೆ ವಿಧಿಸುವ ಶುಲ್ಕಕ್ಕೂ ಗರಿಷ್ಠ ಮಿತಿಯನ್ನು ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇನ್​ವೆಸ್ಟ್​ಮೆಂಟ್ ಅಡ್ವೈಸರ್ ನಿಯಮಗಳನ್ನು ಪರಿಷ್ಕರಿಸಿರುವ ಸೆಬಿ, ಇಂಡಿಪೆಂಡೆಂಟ್​ ಫೈನಾನ್ಶಿಯಲ್ ಅಡ್ವೈಸರ್​ ಅಥವಾ ವೆಲ್ತ್ ಅಡ್ವೈಸರ್ ಮುಂತಾದ ಶೀರ್ಷಿಕೆಗಳನ್ನು ಷೇರು ವಿತರಕರು ಬಳಸುವಂತಿಲ್ಲ. ಅವರು ಇನ್​ವೆಸ್ಟ್​ಮೆಂಟ್ ಅಡ್ವೈಸರ್ ಆಗಿ ನೋಂದಣಿ ಮಾಡಿಸಿಕೊಂಡಿರಬೇಕು. ಒಬ್ಬ ಇನ್​ವೆಸ್ಟ್​ಮೆಂಟ್ ಅಡ್ವೈಸರ್ ವಿತರಣಾ ಸೇವೆಯಲ್ಲಿ ತೊಡಗುವಂತಿಲ್ಲ. ಅದುವೇ ಸಂಸ್ಥೆಗಳಾದರೆ ಅವುಗಳು ಗ್ರಾಹಕರ ಮಟ್ಟದಲ್ಲಿ ಸಲಹೆ ಮತ್ತು ವಿತರಣಾ ವ್ಯವಸ್ಥೆಯನ್ನು ಪ್ರತ್ಯೇಕಿಸಿಕೊಂಡಿರಬೇಕು.

ನಾಲ್ಕು ಕನ್ಸಲ್ಟೇಷನ್ ಪೇಪರ್ಸ್ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಸ್ವೀಕರಿಸಿದ ಬಳಿಕ ನಿಯಮ ಪರಿಷ್ಕರಣೆ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಕೊನೆಯ ಕನ್ಸಲ್ಟೇಷನ್ ಪೇಪರ್ ಅನ್ನು ಪ್ರಕಟಿಸಿ ಸಾರ್ವಜನಿಕರ ಪ್ರತಿಕ್ರಿಯೆ ಸ್ವೀಕರಿಸಲಾಗಿತ್ತು. ಶುಲ್ಕ ಪಾವತಿ ವಿಚಾರದಲ್ಲೂ ಸ್ಪಷ್ಟತೆ ತರುವ ಸಲುವಾಗಿ, ಗರಿಷ್ಠ ಮಿತಿಯನ್ನು ಹಾಕಲಾಗಿದೆ ಎಂದು ಸೆಬಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net