ಎಸ್​ಬಿಐ ಗೃಹಸಾಲ ಇನ್ನಷ್ಟು ಅಗ್ಗವಾಗುವ ನಿರೀಕ್ಷೆ- ಎಂಸಿಎಲ್​ಆರ್​ 5 ಮೂಲಾಂಶ ಕಡಿತ; ನಿಶ್ಚಿತ ಠೇವಣಿ ಬಡ್ಡಿದರ ಕೂಡ ಇಳಿಕೆ

SBI 7 FEB 20
Published on

ಮುಂಬೈ: ದೇಶದ ಬ್ಯಾಂಕಿಂಗ್ ಸೆಕ್ಟರ್​ನ ಅಗ್ರ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಎಲ್ಲ ವಹಿವಾಟುಗಳಿಗೆ ಅನ್ವಯವಾಗುವ ಎಂಸಿಎಲ್​ಆರ್​(ಮಾರ್ಜಿನಲ್​ ಕಾಸ್ಟ್​ ಆಫ್ ಫಂಡ್ ಬೇಸ್ಡ್ ರೇಟ್​) ದರವನ್ನು 5 ಮೂಲಾಂಶ ಕಡಿತಗೊಳಿಸಿದೆ. ಇದು ಫೆಬ್ರವರಿ 10ರಿಂದ ಜಾರಿಗೆ ಬರಲಿದೆ.

ಈ ಕಡಿತದೊಂದಿಗೆ ಒಂದು ವರ್ಷದ ಎಂಸಿಎಲ್​ಆರ್​ ಈಘಿರುವ 7.9ರಿಂದ 7.85ಕ್ಕೆ ಇಳಿಕೆಯಾದಂತೆ ಆಗಲಿದೆ. ಇದೇ ರೀತಿ ಚಿಲ್ಲರೆ ಠೇವಣಿ ಮತ್ತು ಬಲ್ಕ್ ಠೇವಣಿಗಳ ಬಡ್ಡಿದರ ಪರಿಷ್ಕರಿಸಿದ್ದು, ಇದು 2 ಕೋಟಿ ರೂಪಾಯಿಗಿಂತ ಕಡಿಮೆ ಮತ್ತು ಎರಡು ಕೋಟಿ ಮತ್ತು ಹೆಚ್ಚಿನ ಟರ್ಮ್ ಡೆಪಾಸಿಟ್ ಗೆ ಅನ್ವಯವಾಗಲಿದೆ. ಚಿಲ್ಲರೆ ಠೇವಣಿಗಳ ಬಡ್ಡಿದರ 10-50 ಮೂಲಾಂಶ ಕಡಿತಗೊಂಡರೆ, ಬಲ್ಕ್ ಡೆಪಾಸಿಟ್​ಗಳ ಬಡ್ಡಿದರ ಶೇಕಡ 25-50 ಮೂಲಾಂಶ ಕಡಿತಗೊಂಡಿದೆ. ಇದು ಕೂಡ ಫೆಬ್ರವರಿ 10ರಿಂದ ಅನ್ವಯವಾಗುತ್ತದೆ ಎಂದು ಬ್ಯಾಂಕ್ ಹೇಳಿಕೆ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿರುವ ವಿಚಾರ ಪ್ರಕಟಿಸಿದ ಒಂದು ದಿನದ ನಂತರ ಲೀಡ್ ಬ್ಯಾಂಕ್ ಈ ಹೇಳಿಕೆ ಪ್ರಕಟಿಸಿದೆ. ಆರ್​ಬಿಐ ರೆಪೋದರವನ್ನು ಶೇಕಡ 5.15ರಲ್ಲಿ ಮುಂದುವರಿಸಿದರೂ, ದೀರ್ಘಾವಧಿ ರೆಪೋ ವಹಿವಾಟನ್ನು 1 ಲಕ್ಷ ಕೋಟಿ ತನಕ ಎಂದು ಘೋಷಿಸಿದೆ. ಇದರ ಪರಿಣಾಮ, ಬ್ಯಾಂಕುಗಳಿಗೆ ಫಂಡ್​ಗಳ ಮೇಕಿಂಗ್ ಕಾಸ್ಟ್ ಇಳಿಕೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net