ಅಲ್ಪಾವಧಿ ಸಾಲಗಳ ಎಂಸಿಎಲ್​ಆರ್ 5-10 ಮೂಲಾಂಶ ಕಡಿತಗೊಳಿಸಿದ ಎಸ್​ಬಿಐ

SBI 7 FEB 20
Published on

ಮುಂಬೈ: ಅಲ್ಪಾವಧಿ ಸಾಲಗಳ ಮಾರ್ಜಿನಲ್ ಕಾಸ್ಟ್​ ಆಫ್ ಫಂಡ್ಸ್​ ಬೇಸ್ಡ್​ ಲೆಂಡಿಂಗ್​ ರೇಟ್ (ಎಂಸಿಎಲ್​ಆರ್​) ಅನ್ನು 5-10 ಮೂಲಾಂಶ ಕಡಿತಗೊಳಿಸಿರುವುದಾಗಿ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (ಎಸ್​ಬಿಐ) ಬುಧವಾರ ಪ್ರಕಟಿಸಿದೆ.

ಇದು ಮೂರು ತಿಂಗಳ ತನಕ ಅಲ್ಪಾವಧಿ ಸಾಲಗಳಿಗೆ ಸಂಬಂಧಿಸಿದ್ದಾಗಿದೆ. ಕ್ರೆಡಿಟ್ ಆಫ್​ ಟೇಕ್ ಮತ್ತು ಬೇಡಿಕೆ ಹೆಚ್ಚಿಸುವ ಸಲುವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಪರಿಷ್ಕರಣೆಯೊಂದಿಗೆ ಮೂರು ತಿಂಗಳ ತನಕದ ಟೆನೋರ್​ಗಳ ಬ್ಯಾಂಕ್​ ಎಂಸಿಎಲ್​ಆರ್​ ವಾರ್ಷಿಕವಾಗಿ ಶೇಕಡ 6.65 ಗೆ ಇಳಿಕೆಯಾಗಿದೆ. ಇದಕ್ಕೆ ಪೂರಕವಾಗಿ ಎಕ್ಸ್​ಟರ್ನಲ್​ ಬೆಂಚ್​ ಮಾರ್ಕ್​ ಬೇಸ್ಡ್​ ಲೆಂಡಿಂಗ್ ರೇಟ್ ಕೂಡ ಇದೆ.

ಎಸ್​ಬಿಐ ಕಳೆದ ತಿಂಗಳು ಕೂಡ ಎಲ್ಲ ರೀತಿಯ ಸಾಲಗಳ ಮೇಲಿನ ಎಂಸಿಎಲ್​ಆರ್ ಅನ್ನು 25 ಮೂಲಾಂಶ ಕಡಿತಗೊಳಿಸಿತ್ತು. ಇದು 2020ರ ಜೂನ್​ 10ರಿಂದ ಚಾಲ್ತಿಯಲ್ಲಿದೆ.ಈ ಕ್ರಮದಿಂದ ವಿಶೇಷವಾಗಿ ಗೃಹ ಸಾಲದ ಎಂಸಿಎಲ್​ಆರ್​ ವಾರ್ಷಿಕ ಶೇಕಡ 7ಕ್ಕೆ ಇಳಿದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net