ಕಚ್ಚಾ ತೈಲ ಬೆಲೆ ತುಸು ಚೇತರಿಕೆ

Crude oil: ಕಚ್ಚಾ ತೈಲ ಅಗ್ಗ,ಭಾರತಕ್ಕೆ 60 ಸಾವಿರ ಕೋಟಿ ಉಳಿತಾಯ
ಸಾಂದರ್ಭಿಕ ಚಿತ್ರ
Published on

ಸಿಂಗಾಪುರ: ಸೋಮವಾರ ಭಾರಿ ಇಳಿಕೆ ಕಂಡಿದ್ದ ಕಚ್ಚಾತೈಲ ಬೆಲೆಯಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ. ತೈಲ ಬೆಲೆ ಏಷ್ಯಾ ಮಾರುಕಟ್ಟೆಯಲ್ಲಿ ಶೇ. 6 ಏರಿಕೆ ಕಂಡಿದೆ.

ವೆಸ್ಟ್ ಟೆಕ್ಸಾಸ್ ಮಾರುಕಟ್ಟೆಯಲ್ಲಿ ಶೇ. 6.1 ಏರಿಕೆಯಾಗಿ ಒಂದು ಬ್ಯಾರೆಲ್ ತೈಲ ಬೆಲೆ 33 ಡಾಲರ್​ಗೂ ಹೆಚ್ಚಾಗಿತ್ತು. ಬ್ರೆಂಟ್ ಮಾರುಕಟ್ಟೆಯಲ್ಲಿ ಶೇ. 6.6 ಏರಿಕೆಯಾಗಿ ಬ್ಯಾರೆಲ್ ಒಂದರ 36 ಡಾಲರ್ ಆಗಿತ್ತು. ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ಪೈಪೋಟಿ ಉಂಟಾಗಿದ್ದರಿಂದ ಸೋಮವಾರ ಭಾರಿ ಕುಸಿತ ಆಗಿತ್ತು. ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಬೆಲೆಗಳನ್ನು ಭಾರಿ ಕಡಿತ ಮಾಡಲು ಸೌದಿ ಅರೇಬಿಯಾ ಮುಂದಾಗಿದೆ.

ತೈಲ ಉತ್ಪಾದನೆಯನ್ನು 15 ಲಕ್ಷ ಬ್ಯಾರೆಲ್ ಕಡಿತ ಮಾಡಲು ಒಪೆಕ್ ಮುಂದಾಗಿತ್ತು. ಆದರೆ ಕೂಟದ 14 ಸದಸ್ಯ ದೇಶಗಳಲ್ಲೊಂದಾದ, ಜಗತ್ತಿನ ಎರಡನೇ ಅತಿ ದೊಡ್ಡ ತೈಲೋತ್ಪಾದನೆ ದೇಶ ರಷ್ಯಾ ಈ ಪ್ರಸ್ತಾಪನೆಯನ್ನು ತಿರಸ್ಕರಿಸಿತ್ತು. ಈಗ ಅತಿ ದೊಡ್ಡ ತೈಲ ಉತ್ಪಾದನೆ ರಾಷ್ಟ್ರ ಸೌದಿ ಅರೇಬಿಯಾ ಕೂಡ ಒಪೆಕ್ ನಿಲುವಿಗೆ ವಿರುದ್ಧವಾಗಿ ಉತ್ಪಾದನೆ ಹೆಚ್ಚಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net