

ಮುಂಬೈ: ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಆವರಿಸಿಕೊಂಡಿದ್ದು ಅದು ಹೂಡಿಕೆದಾರರ ಮೇಲೆಯೂ ಪ್ರಭಾವ ಬೀರಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಕುಸಿದಿದೆ.
ಇಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 10 ಪೈಸೆ ಕುಸಿದಿದ್ದು 71.42ಕ್ಕೆ ತಲುಪಿದೆ. ಸೋಮವಾರ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 71.32 ರೂಪಾಯಿ ಇತ್ತು.
ಇಂದು ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕಡಿಮೆಯಾದ ಬಳಿಕ 10 ಪೈಸೆ ಕಡಿಮೆಯಾಗಿದೆ 71.42ಕ್ಕೆ ತಲುಪಿದೆ. ಈ ಮಧ್ಯೆ ಬ್ರೆಂಟ್ ಕಚ್ಚಾತೈಲ ಬ್ಯಾರೆಲ್ಗೆ 1.13 ಪರ್ಸಂಟ್ ಇಳಿಕೆಯಾಗಿದ್ದು 57.02 ಯುಎಸ್ ಡಾಲರ್ಗೆ ತಲುಪಿದೆ. (ಏಜೆನ್ಸೀಸ್)