ವರ್ಷದ ಕೊನೆಗೆ ಅಮೆರಿಕನ್ ಡಾಲರ್ ಎದುರು ವಾರ್ಷಿಕ 2.28 ನಷ್ಟದೊಂದಿಗೆ ವಹಿವಾಟು ಮುಗಿಸಿದ ರೂಪಾಯಿ

Dollar-Rupee 31 DEC 19
Published on

ಮುಂಬೈ: ವರ್ಷದ ಕೊನೆಯ ದಿನವಾದ ಡಿ.31ರಂದು ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು 5 ಪೈಸೆ ನಷ್ಟದೊಂದಿಗೆ 71.36 ದರದಲ್ಲಿ ವಹಿವಾಟು ಮುಗಿಸಿದೆ. ಇದರೊಂದಿಗೆ ಈ ವರ್ಷದಲ್ಲಿ ವಾರ್ಷಿಕ 159 ಪೈಸೆ ಅಥವಾ ಶೇಕಡ 2.28 ನಷ್ಟದೊಂದಿಗೆ ರೂಪಾಯಿ ವ್ಯವಹಾರ ನಡೆಯಿತು.

ಇಡೀ ವರ್ಷ ಕರೆನ್ಸಿ ಮಾರುಕಟ್ಟೆ ಮೇಲೆ ಟ್ರೇಡ್ ವಾರ್​, ಕಚ್ಚಾ ತೈಲಬೆಲೆ ಏರಿಕೆ ಮತ್ತು ಹೆಚ್ಚುವರಿ ಆಮದು ಸುಂಕ ಮುಂತಾದ ನಡಾವಳಿಗಳು ಹೆಚ್ಚಿನ ಪರಿಣಾಮ ಬೀರಿದವು. 2018ರಲ್ಲಿ ರೂಪಾಯಿ ವಹಿವಾಟು ಅಮೆರಿಕನ್​ ಡಾಲರ್ ಎದುರು 69.77ರ ದರದಲ್ಲಿ ಮುಕ್ತಾಯವಾಗಿತ್ತು.

ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್​ ಮಾರ್ಕೆಟ್​ನಲ್ಲಿ ರೂಪಾಯಿ ಅಮೆರಿಕನ್ ಡಾಲರ್ ಎದುರು ಮಂಗಳವಾರದ ವಹಿವಾಟನ್ನು 71.28ರಲ್ಲಿ ಆರಂಭಿಸಿತ್ತು. ನಂತರ ಮಧ್ಯಂತರದಲ್ಲಿ 71.23 ಮತ್ತು 71.37ರ ದರಗಳ ನಡುವೆಯೇ ವಹಿವಾಟು ಸಾಗಿದ್ದು, ದಿನದ ಅಂತ್ಯಕ್ಕೆ 71.36ರಲ್ಲಿ ವಹಿವಾಟು ಮುಗಿಸಿದೆ. ನಿನ್ನೆಗಿಂತ 5 ಪೈಸೆ ನಷ್ಟ ದಾಖಲಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net