

ಮುಂಬೈ: ಭಾರತದಲ್ಲಿ ಜನಪ್ರಿಯ ಬೈಕ್ ನಿರ್ಮಾತೃ ಕಂಪನಿಗಳಲ್ಲಿ ಒಂದಾದ ರಾಯಲ್ ಎನ್ಫೀಲ್ಡ್ ಹೊಚ್ಚ ಹೊಸದಾದ ಕ್ಲಾಸಿಕ್ 350 ಬೈಕ್ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.
ಹೊಚ್ಚ ಹೊಸ ಕ್ಲಾಸಿಕ್ 350 ಬೈಕ್ BS-VI ನಿಯಮಾವಳಿ ಪ್ರಕಾರ ಸಿದ್ಧವಾಗಿದೆ. ಹೆಚ್ಚಿನ ಮೆಕಾನಿಕಲ್ ಪರಿಷ್ಕರಣೆ ಜತೆಗೆ ಹೊರನೋಟ ಮತ್ತು ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಯನ್ನು ಈ ಬೈಕ್ ಕಂಡಿದೆ. ಇತರೆ ಮಾದರಿಯ ಬೈಕ್ಗಳಲ್ಲೂ BS-VI ನಿಯಮಾವಳಿ ಬದಲಾವಣೆ, ಪರಿಷ್ಕರಣೆಗಳು ಶೀಘ್ರವೇ ಆಗಿದೆ ಎಂದು ಕಂಪನಿ ತಿಳಿಸಿದೆ.
ಎಂಜಿನ್: ಸರ್ಕಾರ ಜಾರಿಗೊಳಿಸಿರುವ BS-VI ನಿಯಮಾವಳಿ ಪ್ರಕಾರ ಹೊಸ ಎಮಿಷನ್ ನಾರ್ಮ್ಸ್ಗೆ ಈ ಎಂಜಿನ್ ಹೊಂದಿಕೊಂಡಿದೆ. ಕ್ಲಾಸಿಕ್ 350 ಬೈಕ್ನ ಎಂಜಿನ್ 20 PS ನಷ್ಟು ಪವರ್ ಮತ್ತು 28 Nm ನಷ್ಟು ಟಾರ್ಕ್ ಹೊಂದಿದೆ.
ಬಣ್ಣ: ಕ್ಲಾಸಿಕ್ 350 ಬೈಕ್ಗಳು ಸ್ಟೆಲ್ತ್ ಬ್ಲ್ಯಾಕ್, ಕ್ರೋಮ್ ಬ್ಲ್ಯಾಕ್, ಏರ್ಬೋರ್ನ್ ಬ್ಲೂ, ಸಿಗ್ನಲ್ಸ್ ಸ್ಟೋರ್ಮ್ ರೈಡರ್ ಸ್ಯಾಂಡ್, ಗನ್ಮೆಟಲ್ ಗ್ರೇ, ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ ಇವೆ.
ವಾರೆಂಟಿ: ರಾಯಲ್ ಎನ್ಫೀಲ್ಡ್ ತನ್ನ BS-VI ಮಾಡೆಲ್ಗಳಿಗೆ ಹೊಸ ಸರ್ವೀಸ್ ಪ್ಯಾಕೇಜನ್ನೂ ಬಿಡುಗಡೆಗೊಳಿಸಿದೆ. ಇದರಂತೆ, ಮೂರು ವರ್ಷಗಳ ವಾರೆಂಟಿ ಮತ್ತು ರಸ್ತೆ ಬದಿ ನೆರವೂ ಸಿಗಲಿದೆ.
ಬೆಲೆ: ಕ್ಲಾಸಿಕ್ 350ರ ಎಕ್ಸ್ಶೋರೂಂ ಬೆಲೆ 1.65 ಲಕ್ಷ ರೂಪಾಯಿಯಿಂದ ಶುರುವಾಗುತ್ತಿದೆ. ದೇಶಾದ್ಯಂತ ಇರುವ ಔಟ್ಲೆಟ್ಗಳಲ್ಲಿ 10,000 ರೂಪಾಯಿಸಿ ಮುಂಗಡ ಬುಕ್ಕಿಂಗ್ ಕೂಡ ಮಾಡಲು ಅವಕಾಶ ಕಲ್ಪಿಸಿದೆ. (ಏಜೆನ್ಸೀಸ್)