

ನವದೆಹಲಿ: ಚಿಲ್ಲರೆ ಹಣದುಬ್ಬರ ಕಳೆದ ಡಿಸೆಂಬರ್ನಲ್ಲಿ ಶೇ. 7.35 ಕ್ಕೆ ಏರಿಕೆಯಾಗಿದ್ದು ಕಳೆದ ಐದೂವರೆ ವರ್ಷಗಳಲ್ಲೇ ಇದು ಅತ್ಯಂತ ಗರಿಷ್ಠ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ಬಿಡುಗಡೆ ಮಾಡಿದೆ.
2014ರ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.39ರಷ್ಟಿತ್ತು. ಕಳೆದ 2019ರ ನವೆಂಬರ್ನಲ್ಲಿ 5.54ರಷ್ಟಾಗಿತ್ತು. ಬಳಿಕ ಡಿಸೆಂಬರ್ನಲ್ಲಿ ಶೇ.7.35ಕ್ಕೆ ಏರಿದೆ. ಅಷ್ಟೇ ಅಲ್ಲದೆ ನಿಧಾನಗತಿಯ ಆರ್ಥಿಕತೆ ನಡುವೆ ಮತ್ತಷ್ಟು ಬೆಳವಣಿಗೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎನ್ಎಸ್ಒ ಡಾಟಾದ ಪ್ರಕಾರ ಆಹಾರದ ಹಣದುಬ್ಬರ 2019ರ ನವೆಂಬರ್ನಲ್ಲಿ ಶೇ.10.01 ಇತ್ತು. ಅದು ಈಗ ಶೇ.14.12ಕ್ಕೆ ಏರಿದೆ. ಹಾಗೇ ತರಕಾರಿ ಹಣದುಬ್ಬರ ನವೆಂಬರ್ನಲ್ಲಿ ಶೇ.36 ಇತ್ತು. ಅದು ಡಿಸೆಂಬರ್ನಲ್ಲಿ 60.5ಕ್ಕೆ ಏರಿದೆ. (ಏಜೆನ್ಸೀಸ್)