

ಹುಬ್ಬಳ್ಳಿ: ಒಣಮೆಣಸಿನಕಾಯಿ ಬೆಲೆ ಏರುಮುಖವಾಗಿ ಹೊರಟಿದ್ದು, ಸೋಮವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಕ್ವಿಂಟಾಲ್ಗೆ 30 ಸಾವಿರ ರೂ. ಗಡಿ ದಾಟಿದೆ. ಸೋಮವಾರ ಹುಬ್ಬಳ್ಳಿ ಎಪಿಎಂಸಿಗೆ 2918 ಚೀಲ ಮೆಣಸಿನಕಾಯಿ ಬಂದಿತ್ತು.
ಪ್ರತಿ ಕ್ವಿಂಟಾಲ್ಗೆ ಕನಿಷ್ಠ 1,699ರಿಂದ ಗರಿಷ್ಠ 30,101 ರೂ. ವರೆಗೆ ಮಾರಾಟವಾಗಿದೆ. ಬ್ಯಾಡಗಿ ಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಾಲ್ಗೆ 33,333ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಕಡ್ಡಿ 1,869ರಿಂದ 18,009 ರೂ., ಗುಂಟೂರು 695ರಿಂದ 8,909 ರೂ. ದರದಲ್ಲಿ ಮಾರಾಟವಾಗಿದೆ. ಒಟ್ಟು 49,403 ಚೀಲ ಆವಕವಾಗಿವೆ.