ಫಾರ್ಮ್‌ಲ್ಯಾಂಡ್‌ ಹೂಡಿಕೆಯಿಂದ ಉತ್ತಮ ಆದಾಯ: ಶ್ರೀಗಂಧ ಹಾಗೂ ಮಹಾಗನಿ ಬೆಳೆಯಲು ಸುವರ್ಣಾವಕಾಶ

ಉತ್ತಮ ಹೂಡಿಕೆಗಾಗಿ ಈಗ ಪ್ರಕೃತಿ ಸ್ನೇಹಿ ಫಾರ್ಮ್‌ಲ್ಯಾಂಡ್‌ಗಳ ಮೊರೆ ಹೋಗುತ್ತಿದ್ದಾರೆ. ಕಾನೂನುಬದ್ಧವಾಗಿ ಸುರಕ್ಷಿತವಾಗಿರುವ ಈ ಕೃಷಿಭೂಮಿಗಳು ಕೇವಲ ಭೂಮಿಯ ಖರೀದಿಯಷ್ಟೇ ಅಲ್ಲದೆ, ಗ್ರಾಹಕರಿಗೆ ಅತ್ಯುತ್ತಮ ಪ್ರೀಮಿಯಂ ಕೃಷಿ ಅನುಭವವನ್ನು ನೀಡುತ್ತಿವೆ.
Farmlands
ಫಾರ್ಮ್‌ಲ್ಯಾಂಡ್‌ ಹೂಡಿಕೆಯಿಂದ ಉತ್ತಮ ಆದಾಯ
Published on: 

ವೇಗವಾಗಿ ಬದಲಾಗುತ್ತಿರುವ ಇಂದಿನ ಮಹಾನಗರಗಳ ಬದುಕಿನಲ್ಲಿ, ಹಗಲಿರುಳು ಕೆಲಸದ ಒತ್ತಡ ಹಾಗೂ ಸದ್ದು-ಗದ್ದಲಗಳಿಂದ ಬೇಸತ್ತಿರುವ ಜನರಿಗೆ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯುವುದು ಅನಿವಾರ್ಯವಾಗಿದೆ. ಬೆಂಗಳೂರಿನಂತಹ ಗಿಜಿಗುಡುವ ನಗರಗಳ ಜನತೆ ವಾರಾಂತ್ಯದಲ್ಲಿ ರಿಲ್ಯಾಕ್ಸ್ ಮಾಡಲು ಅಥವಾ ದೀರ್ಘಕಾಲೀನ ಸುಸ್ಥಿರ ಜೀವನಶೈಲಿ ಹಾಗೂ ಉತ್ತಮ ಹೂಡಿಕೆಗಾಗಿ ಈಗ ಪ್ರಕೃತಿ ಸ್ನೇಹಿ ಫಾರ್ಮ್‌ಲ್ಯಾಂಡ್‌ಗಳ ಮೊರೆ ಹೋಗುತ್ತಿದ್ದಾರೆ. ಕಾನೂನುಬದ್ಧವಾಗಿ ಸುರಕ್ಷಿತವಾಗಿರುವ ಈ ಕೃಷಿಭೂಮಿಗಳು ಕೇವಲ ಭೂಮಿಯ ಖರೀದಿಯಷ್ಟೇ ಅಲ್ಲದೆ, ಗ್ರಾಹಕರಿಗೆ ಅತ್ಯುತ್ತಮ ಪ್ರೀಮಿಯಂ ಕೃಷಿ ಅನುಭವವನ್ನು ನೀಡುತ್ತಿವೆ.

ಫಾರ್ಮ್‌ಲ್ಯಾಂಡ್​ಗೆ ಹೆಚ್ಚಿದ ಬೇಡಿಕೆ

ಬೆಂಗಳೂರು ನಗರದ ವಿಪರೀತ ಬೆಳವಣಿಗೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇಂದಿನ ಹೊಸ ತಲೆಮಾರಿನ ಖರೀದಿದಾರರು ಕೇವಲ ಜಮೀನು ಖರೀದಿಸಿ ಸುಮ್ಮನಿರುವುದಿಲ್ಲ, ಬದಲಾಗಿ ಅತ್ಯುತ್ತಮ ವ್ಯಕ್ತಿಪರ ನಿರ್ವಹಣೆ, ಭದ್ರತೆ, ಪರಿಸರ ಸ್ನೇಹಿ ಕೃಷಿ ಮತ್ತು ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ಸುಸಜ್ಜಿತ ಫಾರ್ಮ್‌ಹೌಸ್‌ಗಳನ್ನು ಬಯಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ಗಳು (ನಿರ್ವಹಿತ ಕೃಷಿಭೂಮಿ) ಜನರ ಮೊದಲ ಆದ್ಯತೆಯಾಗಿ ಬದಲಾಗಿವೆ.

ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ಗಳ ವಿಶೇಷತೆಯೆಂದರೆ, ಇಲ್ಲಿ ಭೂಮಿಯ ಮಾಲೀಕರು ನೀವಾಗಿದ್ದರೂ ಸಹ ಗಿಡಗಳನ್ನು ನೆಡುವುದು, ಬೇಲಿ ನಿರ್ಮಿಸುವುದು, ನೀರಾವರಿ ವ್ಯವಸ್ಥೆ ಕಲ್ಪಿಸುವುದು ಮತ್ತು ದಿನನಿತ್ಯದ ಕೃಷಿ ಪಾಲನೆ-ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಡೆವಲಪರ್‌ಗಳ ಪರಿಣಿತ ತಂಡವೇ ವಹಿಸಿಕೊಳ್ಳುತ್ತದೆ. ಉದ್ಯೋಗದಲ್ಲಿ ನಿರತರಾದವರಿಗೆ ಅಥವಾ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಈ ವ್ಯವಸ್ಥೆಯು ಅತ್ಯಂತ ಅನುಕೂಲಕರವಾಗಿದ್ದು, ಯಾವುದೇ ತೊಂದರೆಯಿಲ್ಲದೆ ದೀರ್ಘಾವಧಿಯಲ್ಲಿ ಭೂಮಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ.

ವೇಗವಾಗಿ ಅಭಿವೃದ್ಧಿ

ಮೈಸೂರು ಸುತ್ತಮುತ್ತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಇನ್‌ಫ್ರಾಸ್ಟ್ರಕ್ಚರ್ ಯೋಜನೆಗಳು, ಹೊಸ ಪೆರಿಫರಲ್ ರಿಂಗ್ ರೋಡ್ ಹಾಗೂ ಮೈಸೂರು-ಮಳವಳ್ಳಿ ರಸ್ತೆಯ ಸಂಪರ್ಕದಿಂದಾಗಿ ಕೇವಲ 15 ನಿಮಿಷಗಳಲ್ಲಿ ತಲುಪಬಹುದಾದ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಹಾಗೂ ಕೃಷಿ ಹೂಡಿಕೆಗಳು ಭರ್ಜರಿ ಲಾಭ ತರುತ್ತಿವೆ ಎಂದು ಶರಣ್ಯ ಫಾರ್ಮ್ಸ್ ಮಾಲೀಕರಾದ ರಾಜೇಶ್ ವಿ.ಎಂ. ತಿಳಿಸಿದ್ದಾರೆ. ನವ ಮೈಸೂರು ನಿರ್ಮಾಣ ಯೋಜನೆಯು ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಿದ್ದು, ಇಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.

ಮಾಸಿಕ ಆದಾಯ

ಇದೇ ವೇಳೆ, ಶ್ರೀಗಂಧದ ಕೃಷಿಗೆ ಅರಣ್ಯ ಇಲಾಖೆ ಹಾಗೂ ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹದಿಂದಾಗಿ ಜನರು ಶ್ರೀಗಂಧದ ಫಾರ್ಮ್‌ಲ್ಯಾಂಡ್‌ಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ಗಳಲ್ಲಿ ಶ್ರೀಗಂಧ, ಮಹಾಗನಿ ಹಾಗೂ ತೇಗದ ಮರಗಳ ಜೊತೆಗೆ ಹಣ್ಣು, ತರಕಾರಿಗಳನ್ನು ಬೆಳೆದು ಉತ್ತಮ ಆದಾಯ ಗಳಿಸುವುದರ ಜೊತೆಗೆ ಫಾರ್ಮ್‌ಹೌಸ್‌ಗಳ ನಿರ್ಮಾಣದಿಂದ ಮಾಸಿಕ ಆದಾಯವನ್ನೂ ಪಡೆಯಬಹುದು ಎಂದು ರಾಜೇಶ್ ವಿ.ಎಂ. ವಿವರಿಸಿದ್ದಾರೆ.

ಇವೆ ರೀತಿ ಅಪಾರ್ಟ್‌ಮೆಂಟ್, ಸೈಟ್​ಗಳ ಮೇಲಿನ ಹೂಡಿಕೆಗಿಂತ ರೆಸಾರ್ಟ್​ ಸೌಲಭ್ಯಗಳನ್ನು ಒಳಗೊಂಡಿರುವ ಫಾರ್ಮ್‌ಹೌಸ್‌ಗಳು ಇರುವ ಶ್ರೀಗಂಧದ ಫಾರ್ಮ್‌ಲ್ಯಾಂಡ್‌ಗಳ ಮೇಲಿನ ಹೂಡಿಕೆ ಎಂದಿಗೂ ಅನಿರೀಕ್ಷಿತ ಲಾಭಗಳನ್ನು ತರುತ್ತಿದೆ. ಶ್ರೀಗಂಧ ಕೃಷಿಗೆ ಅರಣ್ಯ ಇಲಾಖೆ ಮತ್ತು ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿರುವ ಕಾರಣ ಜನರೀಗ ಫಾರ್ಮ್‌ಲ್ಯಾಂಡ್‌ಗಳನ್ನು ಖರೀದಿಸಿ ಅದರಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಮುಖ್ಯವಾಗಿ ಬೆಂಗಳೂರಿನಿಂದ ನಗರ ಪ್ರವೇಶದಿಂದ ದೂರದಲ್ಲಿರುವ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ಗಳಲ್ಲಿನ ಸೌಲಭ್ಯಗಳಿರುವ ಫಾರ್ಮ್‌ಹೌಸ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಅನೇಕ ನಗರವಾಸಿಗಳು ಫಾರ್ಮ್‌ಹೌಸ್‌ಗಳ ಫಲವತ್ತಾದ ಫಾರ್ಮ್‌ಲ್ಯಾಂಡ್ ಖರೀದಿಸಿ ಅಲ್ಲಿ ಶ್ರೀಗಂಧ, ಮಹಾಗನಿ, ತೇಗದಂತಹ ಹಣ್ಣು, ತರಕಾರಿ, ಸಂಬಾರ ಪದಾರ್ಥಗಳನ್ನು ಬೆಳೆಸಿ ಉತ್ತಮ ಆದಾಯದ ಜತೆಗೆ ನೆಮ್ಮದಿ ಕಾಣುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net